Hukkeri

ಸುತಗಟ್ಟಿ ಘಾಟ್ ಬಳಿ ಚಿರತೆ ಪ್ರತ್ಯಕ್ಷ ; ಸಾರ್ವಜನಿಕರೇ ಇರಲಿ ಎಚ್ಚರ!

Share

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಜನರೇ ನಿಮಗೊಂದು ಬಿಗ್ ಅಲರ್ಟ್. ಕಳೆದ ರಾತ್ರಿ ಪರಶನಟ್ಟಿ ಕ್ರಾಸ್ ಬಳಿ ರಸ್ತೆ ಪಕ್ಕದಲ್ಲೇ ಭೀಕರ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರು ತೀವ್ರ ಆತಂಕಗೊಂಡಿದ್ದಾರೆ. ರಾತ್ರಿ ಸಂಚರಿಸುವಾಗ ಅತೀವ ಜಾಗರೂಕತೆ ವಹಿಸುವಂತೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಹುಕ್ಕೇರಿ ತಾಲೂಕಿನ ಸುತಗಟ್ಟಿ ಘಾಟ್ ಸಮೀಪದ ಪರಶಾನಟ್ಟಿ ಕ್ರಾಸ್ ಹತ್ತಿರ ನಿನ್ನೆ ತಡರಾತ್ರಿ ಬೃಹತ್ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಮುಖ್ಯ ರಸ್ತೆಯ ಪಕ್ಕದಲ್ಲೇ ಕುಳಿತಿದ್ದ ಈ ಚಿರತೆಯನ್ನು ಆ ಮಾರ್ಗವಾಗಿ ಚಲಿಸುತ್ತಿದ್ದ ಕೆಲವು ಯುವಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸ್ಥಳೀಯರಲ್ಲಿ ಭೀತಿ ಸೃಷ್ಟಿಸಿದೆ. ಇನ್ನು ಕೆಲವು ತಿಂಗಳುಗಳ ಹಿಂದಷ್ಟೇ ಇದೇ ತಾಲೂಕಿನ ಮಾವನೂರ ಬಳಿಯೂ ಚಿರತೆ ಇರುವುದನ್ನು ಅರಣ್ಯ ಇಲಾಖೆಯು ಅಧಿಕೃತವಾಗಿ ಖಚಿತಪಡಿಸಿತ್ತು. ಸದ್ಯ ಸಾರ್ವಜನಿಕರು ಇವತ್ತು ಬೆಳಿಗ್ಗೆಯಿಂದಲೇ ಮನೆಯಿಂದ ಹೊರಬರಲು ಹೆದರುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಜರೂರಾಗಿ ಬೋನಿಗೆ ಕೆಡವಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Tags:

error: Content is protected !!