ಸರ್ಕಾರಿ ಬಸ್ ಚಾಲಕ ಬಸ್ ರಿವರ್ಸ್ ತೆಗೆದುಕೊಳ್ಳುತ್ತಿದ್ದ ವೇಳೆ ಕಂಪೌಂಡ್ ಗೋಡೆ ಹಾಗೂ ಬಸ್ ಮಧ್ಯೆ ಸಿಲುಕಿದ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ್ದಾಳೆ ಘಟನೆ ಧಾರವಾಡ ಹಳೇ ಬಸ್ಸ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಧಾರವಾಡ ತಾಲೂಕಿನ ಚಂದನಮಟ್ಟಿ ಗ್ರಾಮದ ಫಾತೀಮಾ ಬಾಬಾಜಾನ್ ಜಾಗೀರದಾರ್ (17) ಎಂಬ ವಿದ್ಯಾರ್ಥಿನಿಯೇ ಈ ಘಟನೆಯಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿನಿ. ಧಾರವಾಡದ ಮದೀನಾ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ ಫಾತೀಮಾ ಕಾಲೇಜು ಬಿಟ್ಟ ನಂತರ ಊರಿಗೆ ಹೋಗಲೆಂದು ಬಸ್ ನಿಲ್ದಾಣಕ್ಕೆ ಬಂದಿದ್ದಳು. ನಿಲ್ದಾಣದಲ್ಲಿ ಜನದಟ್ಟನೆ ಕೂಡ ಇತ್ತು. ಈ ವೇಳೆ ಬಸ್ ಒಂದನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದ ವೇಳೆ ನಿಲ್ದಾಣದ ಕಂಪೌಂಡ್ ಹಾಗೂ ಬಸ್ಸಿನ ಮಧ್ಯೆ ಸಿಲುಕಿದ ಫಾತೀಮಾಳ ತಲೆಗೆ ತೀವ್ರ ಗಾಯವಾಗಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
