ಹುಕ್ಕೇರಿ ನಗರದ ಹೋರವಲಯದ ಕ್ಯಾರಗುಡ್ಡದಲ್ಲಿ ನೂತನ ಹೈಟೆಕ್ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುವದು ಎಂದು ಹುಕ್ಕೇರಿ ನ್ಯಾಯವಾದಿಗಳ ಸಂಘದ ನೂತನ ಅದ್ಯಕ್ಷ ಡಿ ಕೆ ಅವರಗೋಳ ಹೇಳಿದರು.

ಹುಕ್ಕೇರಿ ನ್ಯಾಯವಾದಿಗಳ ಸಂಘದ ಮುಂದಿನ ಎರಡು ವರ್ಷದ ಅವಧಿಗೆ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಡಿ ಕೆ ಅವರಗೋಳ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್ ಎಸ್ ಮರಿನಾಯ್ಕ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ಎಸ್ ಎನ್ ಮಗದುಮ್ಮ ಅತಿ ಹೆಚ್ಚು ಮತ ಪಡೆದು ಆಯ್ಕೆಯಾದರು ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎಸ್ ಎ ಮಲ್ಲಾಪೂರೆ, ಖಜಾಂಚಿ ಸ್ಥಾನಕ್ಕೆ ಶ್ರೀಮತಿ ಎಸ್ ಎಸ್ ಶಿಲ್ಯಯನವರಮಠ ಮತ್ತು ಮಹಿಳಾ ಪ್ರತಿ ನಿಧಿಯಾಗಿ ಶ್ರೀಮತಿ ಎಂ ಎಸ್ ಮಗದುಮ್ಮ ರವರು ಅವಿರೋಧವಾಗಿ ಆಯ್ಕೆಯಾದರು.
ಮುಂಜಾನೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭವಾಗಿ 169 ಮತದಾನ ಹಕ್ಕು ಪಡೆದ ಸದಸ್ಯರಲ್ಲಿ 165 ಸದಸ್ಯರು ಮತದಾನ ಮಾಡಿದರು.
ಮುಖ್ಯ ಚುನಾವಣಾ ಅಧಿಕಾರಿಯಾಗಿ ಎಸ್ ಸಿ ನಾಯಿಕ, ಸಹ ಚುನಾವಣಾ ಅಧಿಕಾರಿ ಡಿ ಪಿ ತಳವಾರ ಮತ್ತು ಕೆ ಪಿ ಶಿರಗಾಂವಕರ ರವರು ಚುನಾವಣಾ ಕಾರ್ಯ ನಿಭಾಯಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಅದ್ಯಕ್ಷ ಡಿ ಕೆ ಅವರಗೋಳ ನಮ್ಮ ಪೆನಲ್ ಜಯಭೇರಿ ಗಳಿಸಲು ಸಹಾಯ ಸಹಕಾರ ಮತ್ತು ಮತ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೆನೆ ಮಯಂರುವ ದಿನಗಳಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸುವ ಕಾರ್ಯಕ್ಕೆ ನಮ್ಮ ಅವದಿಯಲ್ಲಿ ಮೊದಲ ಆದ್ಯತೆ ನೀಡಿ ಕ್ಯಾರಗುಡ್ಡದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವದು ಹಾಗೂ ಬಾರ ಅಸೋಸಿಯೇಷನ್ ಅಭಿವೃದ್ಧಿಗೆ ಶ್ರಮಿಸಲಾಗುವದು ಎಂದರು ( )
ಈ ಸಂದರ್ಭದಲ್ಲಿ ನೂತನ ಚುನಾಯಿತ ವಕೀಲರಿಗೆ ಸದಸ್ಯರು ಅಭಿನಂದನೆ ಸಲ್ಲಿಸಿದರು.
ನ್ಯಾಯವಾದಿಗಳಾದ ಆರ್ ಪಿ ಚೌಗಲಾ, ಅನೀಸ ವಂಟಮೂರಿ, ಕೆ ಎಲ್ ಜಿನರಾಳಿ, ಬಿ ಎಂ ಜಿನರಾಳಿ, ಉಮೇಶ ಪಾಟೀಲ, ಎ ಎಸ್ ಹುಲ್ಲೋಳಿ, ಐ ಬಿ ಅಮ್ಮಣಗಿ,ಬಿ ಕೆ ಮಗೆನ್ನವರ, ಪಿ ಎಸ್ ಪಾಟೀಲ, ವಿನಯ ಪಾಟೀಲ, ಬಿ ಬಿ ಬಾಗಿ , ಎ ಸಿ ಕರೋಶಿ ಯವರು ತಮ್ಮ ಪೆನೆಲ್ ಗೇಲುವಿಗೆ ಶ್ರಮಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಪಿ.ಎಸ್.ಪಾಟೀಲ, ಮಹಾಂತೇಶ ಬೋರಗಲ್ಲಿ, ಸುನೀಲ ಡುಮ್ಮನವರ, ಎ.ಎಸ್.ಚೌಗಲಾ, ಕೆ.ಎಂ.ಭೂಗಡಿಕಟ್ಟಿ, ಅಂಬರೀಶ ಬಾಗೇವಾಡಿ, ರಾಜು ಖಿಚಡಿ, ಅನೀಲ ಕರಡಿ, ಬಿ.ಎಂ.ಪಾಟೀಲ, ಬಿ.ಎ.ಮಂಗಸೂಳಿ, ರಾಜು ಗಸ್ತಿ, ಸೋನು ಕಾಂಬಳೆ, ಪವನ ಮನಗೂಳಿ ಮತ್ತಿತರರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
