Uncategorized

ಬೆಳಗಾವಿಯ ರಾಮದೇವ ಗಲ್ಲಿಯಲ್ಲಿ ಮಧ್ಯರಾತ್ರಿ ಕಳ್ಳತನ ‘ವಿ.ಪಿ. ವೇರ್ಣೇಕರ್ ಆಂಡ್ ಸನ್ಸ್’ಗೆ ಕನ್ನ!!!

Share

ಬೆಳಗಾವಿ ನಗರದ ಖಡೇಬಜಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಮದೇವ ಗಲ್ಲಿಯಲ್ಲಿ ಚಿನ್ನಾಭರಣ ಅಂಗಡಿಯೊಂದರಲ್ಲಿ ಇಂದು ಬೆಳಗಿನ ಜಾವ ಲೂಟಿ ಯತ್ನ ನಡೆದಿರುವ ಘಟನೆ ನಡೆದಿದೆ.

ಬೆಳಗಾವಿ ನಗರದ ಹೃದಯಭಾಗದಲ್ಲಿರುವ ಮಾರುಕ್ಟೆ ಪ್ರದೇಶ ರಾಮದೇವ ಗಲ್ಲಿಯಲ್ಲಿರುವ ವ್ಹಿ.ಪಿ. ವೇರ್ಣೆಕರ ಆಂಡ್ ಸನ್ಸ್ ಅಂಗಡಿಗೆ ಮಧ್ಯರಾತ್ರಿ ಸುಮಾರು 3 ಗಂಟೆ ವೇಳೆಗೆ ವಾಹನದಲ್ಲಿ ಬಂದ ಕಳ್ಳರು ಅಂಗಡಿಯ ಬೀಗ ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನ ವಿಫಲವಾಗಿದೆ ಎನ್ನಲಾಗಿದೆ. ಇದಾದ ಬಳಿಕ ಸುಮಾರು ಎರಡು ಗಂಟೆಗಳ ನಂತರ ಮತ್ತೊಂದು ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಅಂಗಡಿಯೊಳಗಿನ ಕೆಲವು ವಸ್ತುಗಳನ್ನು ತೆಗೆದುಕೊಂಡು ತೆರಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗಲಾಗಿದೆ ಹಾಗೂ ಎಷ್ಟು ಪ್ರಮಾಣದ ನಷ್ಟ ಸಂಭವಿಸಿದೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.ಘಟನಾ ಸ್ಥಳಕ್ಕೆ ಖಡೇಬಜಾರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಸೇರಿದಂತೆ ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತನಿಖೆಯ ಬಳಿಕವೇ ತಿಳಿದುಬರಲಿದೆ.

Tags:

error: Content is protected !!