.ಬೆಳಗಾವಿ ತಾಲೂಕಿನ ಮುತಗಾ ಗ್ರಾಮದಲ್ಲಿ ಪತ್ತೆಯಾಗಿರುವ ಸುಮಾರು ೩೦೦ ವರ್ಷಗಳಷ್ಟು ಹಳೆಯದಾದ, ಅತ್ಯಂತ ವಿಶಿಷ್ಟ ಶಿವಲಿಂಗ ಆಕಾರದ ಐತಿಹಾಸಿಕ ಬಾವಿಗೆ ಇಂದು ಮಾಜಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕ ಅನಿಲ್ ಬೆನಕೆ ಅವರು ಭೇಟಿ ನೀಡಿ ವೀಕ್ಷಿಸಿದರು.
ಬೆಳಗಾವಿಯ ಮುತಗಾದ ಕಂಚವೀರ ನಗರ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ಪುರಾತನ ಕಾಲದ ಐತಿಹಾಸಿಕ ಬಾವಿಯ ವೀಕ್ಷಣೆಗಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಮಾಜಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹಾಗೂ ಮಾಜಿ ಶಾಸಕ ಅನಿಲ್ ಬೆನಕೆ ಅವರು ಜಂಟಿಯಾಗಿ ಭೇಟಿ ನೀಡಿದರು. ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ಅತ್ಯಂತ ವಿಶಿಷ್ಟವಾದ ಶಿವಲಿಂಗ ಆಕಾರದ ಈ ಬಾವಿಯನ್ನು ವೀಕ್ಷಿಸಿ ಮಾತನಾಡಿದ ಮಾಜಿ ಸಚಿವ ಭೈರತಿ ಬಸವರಾಜ್ ಅವರು, ಇಂತಹ ಮಹತ್ವದ ಐತಿಹಾಸಿಕ ತಾಣವನ್ನು ಗ್ರಾಮಸ್ಥರೆಲ್ಲರೂ ಒಟ್ಟಾಗಿ ಅತ್ಯಂತ ಕಾಳಜಿಯಿಂದ ಪುನರ್ ನಿರ್ಮಾಣ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.

ಮಾಜಿ ಶಾಸಕ ಅನಿಲ್ ಬೆನಕೆ ಅವರು ಮಾತನಾಡಿ, ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂತಹ ಬಾವಿಯನ್ನು ಇಂದಿನ ದಿನಗಳಲ್ಲಿ ಸುಸ್ಥಿತಿಯಲ್ಲಿ ಕಾಪಾಡಿಕೊಂಡು ಬಂದಿರುವ ಮುತಗಾ ಗ್ರಾಮದ ಜನತೆಯ ಕಾರ್ಯ ಅಪೂರ್ವವಾದದ್ದು ಎಂದು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಯುವರಾಜ್ ಜಾಧವ್, ಮುರುಗೇಂದ್ರ ಗೌಡ, ವೀರಭದ್ರ ಪೂಜಾರಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಪುರಿ, ಮಾಜಿ ಸೈನಿಕ ಸಾತೇರಿ ಪಾಟೀಲ್, ಭರಮಣಿ ಪಾಟೀಲ್, ಗಜಾನನ ಪಾಟೀಲ್, ಹೇಮಂತ್ ಪಾಟೀಲ್, ಮಹಾವೀರ್ ಗುಡಾಜ್, ದೀಪಕ್ ಪುರಿ, ಪರಶುರಾಮ್ ಕೇದಾರ್, ಸೂರಜ್ ಪಾಟೀಲ್, ಬಾಳಾರಾಮ್ ಚೌಗುಲೆ, ಸುನೀಲ್ ಚೌಗುಲೆ ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದು ಗಣ್ಯರಿಗೆ ಬಾವಿಯ ಇತಿಹಾಸವನ್ನು ಪರಿಚಯಿಸಿದರು
