Belagavi

ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರ ವಿಮಾ ಸೌಲಭ್ಯ ನವೀಕರಣಕ್ಕೆ ಆಗ್ರಹ; ಬೆಳಗಾವಿ ಮಹಾಪೌರರಿಗೆ ಮನವಿ

Share

ಬೆಳಗಾವಿ ಮಹಾನಗರ ಪಾಲಿಕೆಯಿಂದ ಪತ್ರಕರ್ತರಿಗೆ ನೀಡಲಾಗುತ್ತಿರುವ ವಿಮಾ ಸೌಲಭ್ಯವನ್ನು ಶೀಘ್ರದಲ್ಲೇ ನವೀಕರಿಸುವಂತೆ ಒತ್ತಾಯಿಸಿ ಬೆಳಗಾವಿ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ಸ್ ಅಸೋಸಿಯೇಷನ್ ವತಿಯಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನಿಯೋಗದ ಮೂಲಕ ಭೇಟಿ ಮಾಡಿ ಈ ಆಗ್ರಹ ಮಂಡಿಸಲಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆಯಿಂದ ಪತ್ರಕರ್ತರಿಗೆ ಒದಗಿಸಲಾಗುತ್ತಿರುವ ವಿಮಾ ಸೌಲಭ್ಯವನ್ನು ತಕ್ಷಣವೇ ನವೀಕರಿಸಿ, ಈ ಸೌಲಭ್ಯ ನಿರಂತರವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಬೆಳಗಾವಿ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ಸ್ ಅಸೋಸಿಯೇಷನ್ ವತಿಯಿಂದ ಇಂದು ಒತ್ತಾಯಿಸಲಾಯಿತು. ಈ ಸಂಬಂಧ ಸಂಘಟನೆಯ ನಿಯೋಗವು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್, ಮೇಯರ್ ಪ್ರೀತಿ ಕಾಮಕರ್ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಎಂ. ಕಾರ್ತಿಕ್ ಅವರನ್ನು ನೇರವಾಗಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಂದ್ರಕಾಂತ್ ಸುಗಂಧಿ, ಗೌರವಾಧ್ಯಕ್ಷ ಶ್ರೀಕಾಂತ್ ಕುಬಕಡ್ಡಿ,

ಉಪಾಧ್ಯಕ್ಷರುಗಳಾದ ಚಂದು ಶ್ರೀರಾಮುದು ಮತ್ತು ಮಂಜುನಾಥ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಶ್ರೀಧರ, ಸಹ ಕಾರ್ಯದರ್ಶಿ ಅಡಿವೇಶ ಪಾಟೀಲ ಹಾಗೂ ಖಜಾಂಚಿ ಸಹದೇವ ಮಾನೆ ಉಪಸ್ಥಿತರಿದ್ದರು. ಅಲ್ಲದೆ ಅನಿಲ್ ಕಾಜಗಾರ, ಮೈಲಾರಿ ಪಟಾತ್, ಮಂಜುನಾಥ ರೆಡ್ಡಿ, ಮಂಜುನಾಥ ಹುದೇದ್, ಸಿದ್ದನಗೌಡ, ರಾಜೇಶ್, ಸುಭಾನಿ ಮುಲ್ಲಾ, ಸುನಿಲ್, ಪ್ರವೀಣ, ರವಿ ನಾಗೇಶ, ಪ್ರಹ್ಲಾದ್, ಅಶೋಕ, ನಜೀಮ್, ಮಹಾಂತೇಶ, ಶಿವು ಹಾಗೂ ವಿನೋದ ಸೇರಿದಂತೆ ಅನೇಕ ಪತ್ರಕರ್ತರು ಭಾಗವಹಿಸಿ ವಿಮೆ ನವೀಕರಣಕ್ಕೆ ಆಗ್ರಹಿಸಿದರು.

Tags:

error: Content is protected !!