Belagavi

ಮತಗಟ್ಟೆ ಅಧಿಕಾರಿಗಳ ಅದ್ಭುತ ಸಾಧನೆ: ಬೆಳಗಾವಿಯಲ್ಲಿ ನಾಲ್ವರು ಮಹಿಳಾ ಅಧಿಕಾರಿಗಳಿಗೆ ಗೌರವ ಸನ್ಮಾನ

Share

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿ ಅಸಾಧಾರಣ ಸಾಧನೆ ತೋರಿದ ನಾಲ್ವರು ಮಹಿಳಾ ಅಧಿಕಾರಿಗಳಿಗೆ ವಿಶೇಷ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಲಾಗಿದೆ. ಕೇವಲ 13 ದಿನಗಳ ಅತ್ಯಲ್ಪ ಅವಧಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಇವರ ಕರ್ತವ್ಯ ಪ್ರಜ್ಞೆ ಇದೀಗ ಇಡೀ ಜಿಲ್ಲೆಯಾದ್ಯಂತ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಹಮ್ಮಿಕೊಳ್ಳಲಾಗಿದ್ದ ‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ (SSR)-2026’ ರ ಅಡಿಯಲ್ಲಿ, 13-ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತ್ಯಂತ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಾದ ಶ್ರೀದೇವಿ ಕುಲಕರ್ಣಿ, ಈರವ್ವಾ ಅಕ್ಕನ್ನವರ, ಸರೋಜಿನಿ ಫಡಿಪಾಟೀಲ್ ಮತ್ತು ಸಂಗೀತಾ ಹುಬ್ಬಳ್ಳಿ ಅವರಿಗೆ ಕಂದಾಯ ಇಲಾಖೆಯಿಂದ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ. ಕೇವಲ 13 ದಿನಗಳ ದಾಖಲೆಯ ಅವಧಿಯಲ್ಲಿ ತಮ್ಮ ಮತಗಟ್ಟೆಗೆ ಸಂಬಂಧಿಸಿದ ಕಾರ್ಯವನ್ನು ಶೇ. 100 ರಷ್ಟು ಯಶಸ್ವಿಯಾಗಿ ಪೂರ್ಣಗೊಳಿಸಿದ ಇವರ ಕಾರ್ಯದಕ್ಷತೆ ಮತ್ತು ಸಮಯ ಪ್ರಜ್ಞೆಯನ್ನು ಕೊಂಡಾಡಿ, ಬೆಳಗಾವಿ ತಹಶೀಲ್ದಾರರಾದ ಹಣುಮಂತ ಶಿರಹಟ್ಟಿ ಅವರು ವಿಶೇಷವಾಗಿ ಸನ್ಮಾನಿಸಿದರು. ಈ ಮಹಿಳಾ ಅಧಿಕಾರಿಗಳ ನಿರಂತರ ಸಹಕಾರ ಹಾಗೂ ಕಾರ್ಯತತ್ಪರತೆ ಇಡೀ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗಕ್ಕೆ ಮಾದರಿಯಾಗಿದೆ ಎಂದು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು. ಈ ವೇಳೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ಧರು.

Tags:

error: Content is protected !!