Belagavi

ಬೆಳಗಾವಿ DCF ಸಂಚಾರಿ ದಳದ ನೂತನ ಅಧಿಕಾರಿಯಾಗಿ ಎಸ್. ಎಸ್. ನಿಂಗಾಣಿ ಪದಗ್ರಹಣ!

Share

ಬೆಳಗಾವಿ ಜಿಲ್ಲೆಯ ಅರಣ್ಯ ಇಲಾಖೆಯ ಸಂಚಾರಿ ದಳದ ನೂತನ DCF ಅಧಿಕಾರಿಯಾಗಿ ಕನ್ನಡಿಗ ಎಸ್. ಎಸ್. ನಿಂಗಾಣಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಶಿರಸಿಯಲ್ಲಿ ACF ಆಗಿ ಸೇವೆ ಸಲ್ಲಿಸುತ್ತಿದ್ದ ಇವರಿಗೆ ಈಗ ಬಡ್ತಿ ಸಿಕ್ಕಿದ್ದು, ವಲಯದ ಅರಣ್ಯ ಅಧಿಕಾರಿಗಳು ಇವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಬೆಳಗಾವಿಯವರೇ ಆದ ಎಸ್. ಎಸ್. ನಿಂಗಾಣಿ ಅವರು ಈ ಹಿಂದೆ ಖಾನಾಪುರ, ಬೆಳಗಾವಿ ಹಾಗೂ ದಾಂಡೇಲಿ ಭಾಗಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇತ್ತೀಚೆಗಷ್ಟೇ ಇವರಿಗೆ ಬೆಳಗಾವಿ ಜಿಲ್ಲಾ DCF (ಸಂಚಾರಿ ದಳ) ಆಗಿ ಬಡ್ತಿ ಸಿಕ್ಕಿದ್ದು, ಇವರ ಕಾರ್ಯವ್ಯಾಪ್ತಿಗೆ ಕಾರವಾರ, ಧಾರವಾಡ, ಕಲಬುರಗಿ ಹಾಗೂ ಬೆಳಗಾವಿ ಜಿಲ್ಲೆಗಳು ಒಳಪಡಲಿವೆ. ಯಲ್ಲಾಪುರ ಮತ್ತು ಬನವಾಸಿ ಅರಣ್ಯ ಪ್ರದೇಶಗಳ ಮಧ್ಯೆ ನಡೆದಿದ್ದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಭೂ ಅತಿಕ್ರಮಣವನ್ನು ತಮ್ಮ ಧೀಮಂತ ನಾಯಕತ್ವದಲ್ಲಿ ತೆರವುಗೊಳಿಸಿ, ನೂರಾರು ಎಕರೆ ಅರಣ್ಯ ಭೂಮಿಯನ್ನು ಇಲಾಖೆಗೆ ಮರಳಿ ತಂದುಕೊಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಈ ಒತ್ತುವರಿ ಪ್ರಕರಣದ ವಿರುದ್ಧದ ಹೈಕೋರ್ಟ್ ಹೋರಾಟ ಮುಗಿದ ತಕ್ಷಣವೇ ಅವರು ಇದೀಗ ಬೆಳಗಾವಿಯಲ್ಲಿ ಅಧಿಕೃತವಾಗಿ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Tags:

error: Content is protected !!