Belagavi

ಬೆಳಗಾವಿಯಲ್ಲಿ ಮುಂಗಾರು ಆರ್ಭಟ

Share

“ಬೆಳಗಾವಿ ನಗರದಲ್ಲಿ ಮುಂಗಾರು ಮಳೆ ಧೋ ಎಂದು ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇದೀಗ ನಗರದ ಶಹಾಪುರ ಭಾಗದಲ್ಲಿ ಮುಸಲಧಾರೆ ಮಳೆಗೆ ಬೋರ್ಡಿಂಗ್‌ ಒಂದರ ರಕ್ಷಣಾ ಗೋಡೆ ಕುಸಿದು ಬಿದ್ದಿರುವ ಆತಂಕಕಾರಿ ಘಟನೆ ವರದಿಯಾಗಿದೆ.

ಬೆಳಗಾವಿ ನಗರದ ಶಹಾಪುರ ಕಾಂಪ್ಲೆಕ್ಸ್ ವ್ಯಾಪ್ತಿಯ ನಾಥ್ ಪೈ ಸರ್ಕಲ್ ಬಳಿ ಇರುವ ಐತಿಹಾಸಿಕ ಸಿದ್ಧಾರ್ಥ್ ಬೋರ್ಡಿಂಗ್‌ನ ರಕ್ಷಣಾ ಗೋಡೆಯು ಸತತವಾಗಿ ಸುರಿಯುತ್ತಿರುವ ಮುಸಲಧಾರೆ ಮಳೆಗೆ ಸಿಲುಕಿ ಹಠಾತ್ತಾಗಿ ಕುಸಿದು ಬಿದ್ದಿದೆ. ನಿರಂತರ ಮಳೆಯಿಂದಾಗಿ ಗೋಡೆಯ ಪಾಯ ಸಂಪೂರ್ಣ ದುರ್ಬಲಗೊಂಡು ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗೋಡೆ ಕುಸಿದ ತಕ್ಷಣ ಸುತ್ತಮುತ್ತಲಿನ ಪರಿಸರದಲ್ಲಿ ಕೆಲಕಾಲ ಭೀತಿ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್, ಅಪಘಾತ ಸಂಭವಿಸಿದ ಸಮಯದಲ್ಲಿ ಆ ರಸ್ತೆಯಲ್ಲಿ ಸಾರ್ವಜನಿಕರ ಹಾಗೂ ವಾಹನಗಳ ಸಂಚಾರ ವಿರಳವಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಗೋಡೆ ಕುಸಿತದ ತೀವ್ರತೆಗೆ ಸಿದ್ಧಾರ್ಥ್ ಬೋರ್ಡಿಂಗ್‌ನ ಆಸ್ತಿಪಾಸ್ತಿಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

Tags:

error: Content is protected !!