ಧಾರವಾಡದ ಗಾಮನಗಟ್ಟಿ ಗ್ರಾಮದಲ್ಲಿ ನೂತನ ಗ್ರಂಥಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಅಧಿಕೃತವಾಗಿ ಕ್ಷೇತ್ರದ ಶಾಸಕ ಹಾಗೂ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಅವರು ಚಾಲನೆಯನ್ನು ನೀಡಿದರು.



ವೈ- ಈ ವೇಳೆ ಮಾತನಾಡಿದ ಬೆಲ್ಲದ ಅವರು ಈ ನೂತನ ಗ್ರಂಥಾಲಯವು ವಿದ್ಯಾರ್ಥಿಗಳು, ಯುವಜನತೆ ಹಾಗೂ ಸಾರ್ವಜನಿಕರಿಗೆ ಜ್ಞಾನಾರ್ಜನೆಯ ಉತ್ತಮ ಕೇಂದ್ರವಾಗಿ ರೂಪುಗೊಂಡು, ಶಿಕ್ಷಣ ಮತ್ತು ಓದುವ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯ ಚಂದ್ರಶೇಖರ್ ಮನಗುಂಡಿ, ಮಾಜಿ ಪಾಲಿಕೆ ಸದ್ಯಸ್ಯ ಕರೆಪ್ಪ ಬಿಸಗಲ್ಲ, ಬಿಜೆಪಿ ಯುವ ಮುಖಂಡ ರಾಜು ಬೆಂಗೇರಿ ಇತರರಿದ್ದರು.

