ರಾಜ್ಯದಲ್ಲಿ ಮಳೆಗಾಲ ಆರಂಭವಾಗಿ ಒಂದು ತಿಂಗಳೂ ಕಳೆದರು ಮಳೆ ಆರಂಭವಾಗಿ ಒಂದು ತಿಂಗಳು ಕಳೆದರು ಮಳೆಯೇ ಇಲ್ಲ. ಹೀಗಾಗಿ ರೈತರು ಆತಂಕದಲ್ಲಿದ್ದು, ಮಳೆಗಾಗಿ ಪಾರ್ಥನೆ ಮಾಡುತ್ತಿದ್ದಾರೆ. ಕತ್ತೆ ಮದುವೆ ಮೂಲಕ ವರುಣನ ಆಗಮನಕ್ಕಾಗಿ ಕಾಯುತ್ತಿದ್ದಾರೆ.

ಜೂನ್ ತಿಂಗಳು ಕಳೆಯುತ್ತಾ ಬಂದರೂ ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಸುಳಿವೇ ಇಲ್ಲ. ವರುಣ ದೇವನ ಮುನಿಸಿಗೆ ಇಡೀ ರೈತ ಸಮುದಾಯ ಕಂಗಾಲಾಗಿದ್ದು, ಬಿತ್ತನೆ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಈ ನಡುವೆ, ಮಳೆ ಕರುಣಿಸುವಂತೆ ವಿಜಯಪುರದಲ್ಲಿ ವಿಶಿಷ್ಟ ಹಾಗೂ ಸಾಂಪ್ರದಾಯಿಕ ಆಚರಣೆಯೊಂದು ಜರುಗಿದೆ.
ಮಳೆಗಾಗಿ ಕತ್ತೆಗಳ ಮೊರೆ ಹೋಗಿರುವ ಜಿಲ್ಲೆಯ ರೈತಾಪಿ ವರ್ಗ, ಜೋಡಿ ಕತ್ತೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡುವ ಮೂಲಕ ವರುಣನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದೆ. ವಿಜಯಪುರದ ಅಡಕಿಗಲ್ಲಿ ಯಲ್ಲಿ ಈ ಅಪರೂಪದ ಕಲ್ಯಾಣ ಮಹೋತ್ಸವ ನಡೆದಿದೆ. ಕತ್ತೆಗಳಿಗೆ ಮದುವೆ ಮಾಡಿದರೆ ಮಳೆಯಾಗುತ್ತದೆ ಎನ್ನುವ ದೃಢ ನಂಬಿಕೆ ಗ್ರಾಮೀಣ ಭಾಗದಲ್ಲಿದೆ. ಹೀಗಾಗಿ ಮದುವೆ ಮಾಡಿದ್ದು, ಕಾಕತಾಳಿವಯೋ ಏನೋ ಮದುವೆ ಬಳಿಕ ಈ ಭಾಗದಲ್ಲಿ ಉತ್ತಮ ಮಳೆಯಾಗಿದೆ.
ಕತ್ತೆಗಳಿಗೆ ಬಾಸಿಂಗ ಕಟ್ಟಿ, ಮದುಮಕ್ಕಳಂತೆ ಸುಂದರವಾಗಿ ಸಿಂಗರಿಸಲಾಗಿತ್ತು. ಮಂತ್ರಘೋಷಗಳ ನಡುವೆ ಕತ್ತೆಗಳ ಕಲ್ಯಾಣ ನೆರವೇರಿದ್ದು, ನೆರೆದಿದ್ದ ನೂರಾರು ಜನ ಅಕ್ಷತೆ ಹಾಕಿ ಮಳೆರಾಯನಿಗೆ ಪ್ರಾರ್ಥನೆ ಸಲ್ಲಿಸಿದರು. ಮದುವೆಯ ನಂತರ ಮಂಗಳವಾದ್ಯದೊಂದಿಗೆ ಕತ್ತೆಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಳಿಕ ಭೋಜನದ ವ್ಯವಸ್ಥೆ ಕೂಡಾ ಮಾಡಲಾಗಿತ್ತು. ಕತ್ತೆಗಳ ಕೂಗೂ ಜೋರಾಗಿರುತ್ತೆ. ಅದು ವರುಣ ದೇವನಿಗೆ ಕೇಳಲಿ ಅನ್ನೋ ಆಶಯದಂತೆ ಪೂರ್ವಿವರು ಈ ಆಚರಣೆ ಮಾಡುತ್ತಿದ್ದು, ಅದನ್ನು ಈಗಲು ರೈತರು ಪಾಲಿಸಿಕೊಂಡು ಬರುತ್ತಿದ್ದಾರೆ.
ಒಟ್ಟಾರೆ ಮಳೆಗಾಗಿ ರಾಜ್ಯದಲ್ಲಿ ರೈತಾಪಿ ವರ್ಗ ಪೂಜೆ ಪೂನಸ್ಕಾರ ಮಾಡುತ್ತಿದ್ದು, ವರುಣನಿಗಾಗಿ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಯಾಗುವ ಆಶಾಭಾವನೆಯಿದ್ದು, ಸಾಂಪ್ರದಾಯಿಕ ಆಚರಣೆ ಮೂಲಕ ಮಳೆಗಾಗಿ ಕಾಯುತ್ತಿದ್ದಾರೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
