ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಬೆಳಗಾವಿಯಲ್ಲಿ ಅರ್ಥಪೂರ್ಣ ಕಾರ್ಯಕ್ರಮವೊಂದು ಜರುಗಿದೆ. ಗೋಂಧಳಿ ಗಲ್ಲಿಯ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಸಮಾಜದ ಜೀವದಾತರಾದ ವೈದ್ಯರನ್ನು ಗೌರವಿಸಿ, ಸನ್ಮಾನಿಸಲಾಗಿದೆ.

ಬೆಳಗಾವಿಯ ಗೋಂಧಳಿ ಗಲ್ಲಿಯ ಆಟೋ ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಸಮಾಜಕ್ಕೆ ವೈದ್ಯರು ನೀಡುತ್ತಿರುವ ಅನನ್ಯ ಸೇವೆಯನ್ನು ಸ್ಮರಿಸಿ, ಪ್ರಮುಖ ವೈದ್ಯರಾದ ಡಾ. ಇನಾಮದಾರ ಹಾಗೂ ಡಾ. ಭೋಬೆ ಅವರಿಗೆ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಿಕ್ಷಾ ಚಾಲಕರು ಹಾಗೂ

ಮಾಲೀಕರಾದ ವೈಭವಿ ಕೋಣೆವಾಡಿ, ನಾನಾ ಅಷ್ಟೇಕರ, ಜ್ಯೋತಿಬಾ ಅಷ್ಟೇಕರ, ವಿನಾಯಕ ಪುಜಾರಿ, ಪಿ.ಜೆ. ಕಾಮಕರ, ರಾಜು ಕಾಂಬಳೆ, ಅಶೋಕ ಪಾಟೀಲ್, ವಿಠ್ಠಲ ಹುಂದ್ರೆ ಮತ್ತು ಅಶೋಕ ಕೋಣೆವಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
