Chikkodi

ಚಿಕ್ಕೋಡಿ ಉಪವಿಭಾಗದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭ: ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ

Share

ಚಿಕ್ಕೋಡಿ-ಸದಲಗಾ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮನೆ ಮನೆಗೆ ತೆರಳಿ ಎನ್ಯೂಮರೇಟರ್ ಫಾರ್ಮ್ ವಿತರಿಸುವ ಮಹತ್ವದ ಕಾರ್ಯ ಜೂನ್ 30ರಿಂದ ಜುಲೈ 29ರ ವರೆಗೆ ನಡೆಯಲಿದೆ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕ್ಷೇತ್ರದ ಒಟ್ಟು 246 ಮತಗಟ್ಟೆಗಳಲ್ಲಿ 246 ಬಿಎಲ್‌ಒ ಗಳು ಹಾಗೂ 25 ಜನ ಮೇಲ್ವಿಚಾರಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಒಟ್ಟು 2,36,823 ಮತದಾರರಿದ್ದಾರೆ.

2022 ಮತ್ತು 2025ರ ಮತದಾರರ ಪಟ್ಟಿಯನ್ನು ಆಧರಿಸಿ ಕೌಟುಂಬಿಕ ಮ್ಯಾಪಿಂಗ್ ಕಾರ್ಯ ಮಾಡಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಚಿಕ್ಕೋಡಿ ತಾಲೂಕು ಬೆಳಗಾವಿ ಜಿಲ್ಲೆಯಲ್ಲೇ ಶೇ. 94.69 ರಷ್ಟು ಸಾಧನೆಯೊಂದಿಗೆ 3ನೇ ಸ್ಥಾನದಲ್ಲಿದೆ ಎಂದು ಶ್ಲಾಘಿಸಿದರು.

ಇದೇ ವೇಳೆ ಗೈರುಹಾಜರಿ, ಮರಣ, ದ್ವಿಪ್ರತಿ ಹಾಗೂ ಸ್ಥಳಾಂತರಗೊಂಡ ಒಟ್ಟು 13,649 ಮತದಾರರನ್ನು ಗುರುತಿಸಲಾಗಿದ್ದು, ಇಂದಿನಿಂದ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಎರಡು ಪ್ರತಿಗಳಲ್ಲಿ ಫಾರ್ಮ್‌ಗಳನ್ನು ವಿತರಿಸಿ ವಿವರಗಳನ್ನು ಪರಿಶೀಲಿಸಲಿದ್ದಾರೆ. ಸಾರ್ವಜನಿಕರು ಅಗತ್ಯ ವಿವರಗಳನ್ನು ನೀಡಿ ಬಿಎಲ್‌ಒಗಳಿಗೆ ಸಹಕರಿಸಬೇಕು ಎಂದು ಕೋರಿದ್ದಾರೆ.

ಬಿಎಲ್‌ಒ ಮತ್ತು ಮೇಲ್ವಿಚಾರಕರ ಅನುಕೂಲಕ್ಕಾಗಿ ಫೆಸಿಲಿಟೇಶನ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದ್ದು, ಕುಡಿಯುವ ನೀರು ಹಾಗೂ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬೈಟ್-೧ ಸುಭಾಷ ಸಂಪಗಾವಿ ಉಪವಿಭಾಗಧಿಕಾರಿ

Tags:

error: Content is protected !!