ಹುಕ್ಕೇರಿ ನಗರದಲ್ಲಿ ತಾಲೂಕಾ ಆಡಳಿತ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗ್ರೇಡ ೨ ತಹಸಿಲ್ದಾರ ಪ್ರಕಾಶ ಕಲ್ಲೋಳ್ಳಿ ಯವರ ಅದ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ನಾಡಪ್ರಭು ಕೆಂಪೇಗೌಡರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.
ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಕೆಂಪೇಗೌಡರ ಕುರಿತು ಭಾಷಣ ಮತ್ತು ಚಿತ್ರ ಕಲಾ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ ಕರ್ನಾಟಕ ರಾಜ್ಯ ಅಂತರಾಷ್ಟ್ರೀಯ ಗುರುತಿಸಲು ಕೆಂಪೇಗೌಡರ ಪಾತ್ರ ಬಹು ಮುಖ್ಯವಾಗಿದೆ ಎಂದರು ( )
ವೇದಿಕೆ ಮೇಲೆ ಅಂಜನಾ ಅಣ್ಣಿಗೇರಿ, ಪ್ರಕಾಶ ಪೂಜೇರಿ, ಎ ಐ ಕೋಟಿವಾಲೆ, ಸುನಿತಾ ಮಗದುಮ್ಮ, ಕುಮಾರ ಬಡಿಗೇರ, ಉಪ ತಹಸಿಲ್ದಾರ ಎ ಸಿ ಏಶ್ಯಾಗೋಳ, ಪಶು ಸಂಗೋಪನಾ ಇಲಾಖೆ ಅಧಿಕಾರಿ ರಾಜು ಮೇತ್ರೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ,ಮಹೇಶ ಬಜಂತ್ರಿ,ಎಂ ಆರ ಕಳ್ಳಿಮನಿ, ಸುರೇಶ ಸಿದ್ನಾಳ, ಎಸ್ ಟಿ ಗಸ್ತಿ, ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
