ಬೆಳಗಾವಿ: ನಮ್ಮ ಸಮಾಜ ಹಳ್ಳಿಗಳ ಸುಧಾರಣೆಗಾಗಿ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೀಯ, ಇತಿಹಾಸಯುಳ್ಳ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರದ ಮೌಲ್ಯ ಉಳಿಸಿ ಬೆಳೆಸಬೇಕು ಎಂದು ಶ್ರೀ ಮ. ನಿ. ಪ್ರ ಶಿವಮೂರ್ತಿ ಮಹಾಸ್ವಾಮಿಗಳು ಕರೆ ನೀಡಿದರು ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಲಾದ 2071 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀಗಳು ಮಾತನಾಡಿದರು.


ನಾಡಿನ ಪ್ರಗತಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಸಮಾಜದಲ್ಲಿ ಒಂದು ಒಳ್ಳೆಯ ಕಾರ್ಯ ನಡೆಸಬೇಕಾದರೆ ಎಲ್ಲರೂ ಕೈ ಜೋಡಿಸಬೇಕು, ಹೀಗಾಗಿ ಶ್ರೀ ಧರ್ಮಸ್ಥಳ ಪೂಜ್ಯರ ನೇತೃತ್ವದಲ್ಲಿ ಮಹತ್ವದ ಕಾರ್ಯಗಳು ನಡೆಯುತ್ತಿವೆ ಅವುಗಳು ನಾವೆಲ್ಲರೂ ಒಂದಾಗಿ ಬೆಂಬಲ ನೀಡಬೇಕು ಎಂದು ಶ್ರೀಗಳು ತಿಳಿಸಿದರು.

ಧಾರವಾಡ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ದಯಾಶೀಲ ಮಾತನಾಡಿ, ಉತ್ತಮ ಸಮಾಜ ಹಾಗೂ ಬದುಕು ರೂಪುಗೊಳ್ಳುವಲ್ಲಿ ಅವಿರತವಾಗಿ ಸಮಾಜಸೇವೆ ಸಲ್ಲಿಸುತ್ತಿರುವ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದೊಂದಿಗೆ ನಡೆಯುತ್ತಿರುವ ಯೋಜನೆಯ ಎಲ್ಲಾ ಕಾರ್ಯಕ್ರಮಗಳ ಸದುಪಯೋಗ ಪಡೆಯುವಂತೆ ಸಮಾಜದ ಅಸಹಾಯಕ ಕುಟುಂಬಗಳ ಏಳ್ಗೆ ಬಗ್ಗೆ ಇರುವ ಕಳಕಳಿ ಹಾಗೂ ದುಶ್ಚಟಮುಕ್ತ ವ್ಯಕ್ತಿ ತನ್ನ ಉತ್ತಮವಾದ ಬದುಕನ್ನು ಕಟ್ಟಿಕೊಳ್ಳುವ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸಚಿನ ಸುರೇಶ ಮಂಡು ಅವರು ಮಾತನಾಡಿ, ಶಿಬಿರಾರ್ಥಿಗಳಿಗೆ ಉತ್ತಮ ಜೀವನ ನಡೆಸುವಂತೆ ಶುಭ ಹಾರೈಸಿದರು.
ಸುಳೇಬಾವಿ ಗ್ರಾಮದಲ್ಲಿ 2071 ನೇ ಮದ್ಯವರ್ಜನ ಶಿಬಿರ ಯಶಸ್ವಿಯಾಗಿ ಜರುಗಿದ್ದು 55 ಶಿಬಿರಾರ್ಥಿಗಳು ಪಾನಮುಕ್ತ ಜೀವನ ನಡೆಸಲು ಸನ್ನದ್ಧರಾದರು .
ಈ ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರು ಸತೀಶ ನಾಯ್ಕ, ಗೋಪಾಲ ಪಿಟಗಿ, ಆನಂದ ಶೆಟ್ಟಿ ,ಪಕಿರವ್ವ ಅಮರಾಪುರ, ಗಿರಿಜಾ ಪಾಟೀಲ, ಬಸವರಾಜ ಮಾದಮ್ಮನವರ ,ವೀರಬದ್ರ ನೇಸರಗಿ, ಶ್ರೀಧರ ಕರೇಮನಿ , ಬಾಬು ವಾಗೇರಿ, ಬಸವರಾಜ ಇಂಗಳೆ , ಶಿಬಿರದ ಯೋಜನಾಧಿಕಾರಿ ಭಾಸ್ಕರ್ , ಶಿಭಿರಾಧಿಕಾರಿ ದಿವಾಕರ ಪೂಜಾರಿ, ಆರೋಗ್ಯ ಸಹಾಯಕಿ ಕುಮಾರಿ ತುಷಾರ ಖಾಸಭಾಗ್ , ತಾಲೂಕಿನ ಯೋಜನಾಧಿಕಾರಿ ಸುಭಾಷ್ ಪಿ.ಸಿ ಸ್ವಾಗತಿಸಿದರು, ವಲಯದ ಮೇಲ್ವಿಚಾರಕರು ದಯಾನಂದ ವಂದಿಸಿದರು.
