ಬೆಳಗಾವಿ ನಗರದ ಶ್ರೀ ಮಾರುತಿ ನಗರ ಎರಡನೇ ಹಂತದ ನಿವಾಸಿಗಳಿಗೆ ಕುಡಿಯುವ ನೀರು, ಸ್ವಚ್ಛತೆ, ರಸ್ತೆ ಹಾಗೂ ಬೀದಿದೀಪಗಳು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ತುರ್ತಾಗಿ ಒದಗಿಸುವಂತೆ ಶ್ರೀ ಮಾರುತಿ ನಗರ ಎರಡನೇ ಹಂತ ರಹವಾಸಿಗಳ ಅಭಿವೃದ್ಧಿಯ ಸಂಘದಿಂದ ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತೀಕ ಎಂ, ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಶ್ರೀ ಮಾರುತಿ ನಗರ ಎರಡನೇ ಹಂತದಲ್ಲಿ ನೂರಾರು ಕುಟುಂಬಗಳು ಕಳೆದ 06-07 ವರ್ಷಗಳಿಂದ ಈ ವಾಸಿಸುತ್ತಿದ್ದೆವೆ. ಆದರೆ, ನಗರದ ನಿವಾಸಿಗಳಿಗೆ ಮಹಾನಗರ ಪಾಲಿಕೆಯಿಂದ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ, ಮಳೆ ಸಂದರ್ಭದಲ್ಲಿ ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಮಹಿಳೆಯರು, ವಯಸ್ಕರರು ದಿವ್ಯಾಂಗರು ಮತ್ತು ಕೂಲಿಕಾರರು ಮತ್ತು ಮದ್ಯಮ ವರ್ಗದ ಕುಟಂಬದವರು ವಾಸಿಸುವ ನಗರವಾಗಿದೆ. ಹೀಗಾಗಿ ಅಧಿಕಾರಿಗಳು ಈ ನಗರಕ್ಕೆ ಶೀಘ್ರವೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು.
ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಬೇಡಿಕೆ
ಶುದ್ಧ ಕುಡಿಯವ ನೀರು ಪೂರೈಕೆ ಸಲುವಾಗಿ ಸಂಪರ್ಕ ಪೈಪಲೈನ ಹಾಕಿ 24×7 ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಶ್ರೀ ಮಾರುತಿ ನಗರ ಎರಡನೇ ಹಂತ ರಹವಾಸಿಗಳ ಅಭಿವೃದ್ಧಿಯ ಸಂಘ( ರಿ) ಸಾಂಬ್ರಾ ರಸ್ತೆ ಬೆಳಗಾವಿ ನಗರಕ್ಕೆ ಸಾರ್ವಜನಿಕರು ಸಂಚರಿಸಲು ನೇರವಾಗಿ Highway Road ಗೆ ಜೋಡಣೆ ಮಾಡಿ ಎರಡು ಸುಸಜ್ಜಿತವಾದ ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು. ಶ್ರೀ ಮಾರುತಿ ನಗರದಲ್ಲಿರುವ ಒಳರಸ್ತೆಗಳನ್ನು ಅಗಲೀಕರಣದೊಂದಿಗೆ ಡಾಂಬರೀಕರಣ ಮಾಡಿ ದುರಸ್ತಿ ಮಾಡಬೇಕು. ನಗರದಲ್ಲಿ ವಾಸಿಸುವ ಎಲ್ಲಾ ಕುಟುಂಬಗಳ ಮನೆಗಳಿಗೆ ಒಳಚರಂಡಿ ಪೈಪಲೈನ ಹಾಕಿಸಿ Safety Tank ಗೆ ಜೋಡಣೆ ಮಾಡಿ ಒಳಚರಂಡಿ ವ್ಯವಸ್ಥೆ ಶೀಘ್ರವೇ ಸುಧಾರಣೆ ಮಾಡಬೇಕಿದೆ. ರಸ್ತೆಗಳು ಮತ್ತು ಸರ್ಕಲ್‌ಗಳಿಗೆ ವಿದ್ಯುತ ಕಂಬಗಳು ಮತ್ತು ವಿದ್ಯುತ್ ಬಲ್ಪಗಳನ್ನು ಅಳವಡಿಸುವುದು ಹಾಗೂ ರಸ್ತೆಯ ಪ್ರಮುಖ ಸರ್ಕಲ್‌ಗಳಿಗೆ ದೊಡ್ಡಗಾತ್ರದ ಬಲ್ಪಗಳನ್ನು ಹಾಕಬೇಕು. ಕಸ ವಿಲೇವಾರಿ ನಿರ್ವಹಣೆಯನ್ನು ಪ್ರತಿನಿತ್ಯ ಮಾಡುವಂತೆ ಕ್ರಮಕೈಗೊಳ್ಳಬೇಕು.
ಶ್ರೀ ಮಾರುತಿ ನಗರದಲ್ಲಿರುವ ರಸ್ತೆಗಳಿಗೆ ಗಟಾರಗಳನ್ನು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಶ್ರೀ ಮಾರುತಿ ನಗರ ಎರಡನೇ ಹಂತದ ರಹವಾಸಿಗಳಿಗೆ ಅನುಕೂಲಕರ, ಸ್ವಚ್ಛ ಮತ್ತು ನಗರವನ್ನು ಸುಂದರವಾಗಿಸಲು ಹಾಗೂ ಇಲ್ಲಿನ ಜನಸಾಮಾನ್ಯರ ಕುಟಂಬಗಳು ನೆಲಸುವಂತೆ ಮಾಡಲು ನಿಮ್ಮ ಸಹಕಾರ ಅತ್ಯಂತ ಅವಶ್ಯವಾಗಿದ್ದು ಸರ್ಕಾರಕ್ಕೆ ತೆರಿಗೆ ಪಾವತಿ ಮಾಡುತ್ತಿರುವ ಇಲ್ಲಿನ ಜನರ ಹಿತದೃಷಿಯಿಂದ ಹೊರವಲಯದಲ್ಲಿ ವಾಸಿಸುತ್ತಿರುವ ಎಲ್ಲಾ ರಹವಾಸಿಗಳಿಗೆ ನಿಯಮಾನುಸಾರವಾಗಿ ಮಹಾನಗರ ಪಾಲಿಕೆ ಮತ್ತು ಸರ್ಕಾರದಿಂದ ನೀಡಬಹುದಾದ ಮೂಲಭೂತ ಸೌಲಭ್ಯಗಳಾದ ರಸ್ತೆಗಳು, ಕುಡಿಯುವ ನೀರು ಸೌಕರ್ಯ, ವಿದ್ಯುತ್ ದೀಪಗಳು ಮತ್ತು ವಿವಿಧ ಎಲ್ಲಾ ಸೌರ್ಕಯಗಳನ್ನು ಒದಗಿಸಿ ಇಲ್ಲಿನ ಜನರನ್ನು ರಕ್ಷಣೆ ಮಾಡಿ ಶ್ರೀ ಮಾರುತಿ ನಗರ ಎರಡನೇ ಹಂತ ರಹವಾಸಿಗಳ ಬಡಾವಣೆಯನ್ನು ಅಭಿವೃದ್ಧಿಪಡಿಸಬೇಕೆಂದು ಪಾಲಿಕೆ ಆಯುಕ್ತರಿಗೆ ಮನವಿ ಮೂಲಕ ತಿಳಿಸಿದರು.
ಸಂಘದ ಅಧ್ಯಕ್ಷ ಅಶೋಕ ನಿಂಗಪ್ಪ ಅಣ್ಣಿಗೇರಿ, ಉಪಾಧ್ಯಕ್ಷರಾದ ರಮೇಶ ಮಗದುಮ್ಮ, ಸದಸ್ಯರಾದ ಅರುಣ ಮಾನೆ, ಶಿವಾಜಿ ಅಡಿಮನಿ, ಬಸವರಾಜ ಹಂಡಗಿ, ಕಮಲಾಪೂರಿ, ಕಿರಣ ಅಂಗಡಿ, ಪ್ರಕಾಶ ಶಿವಯೋಗಿ, ಹಾಗೂ ಉಪಸ್ಥಿತರಿದ್ದರು.
