Chikkodi

ಹಿರೇಕೋಡಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Share

ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಹಿರೇಕೋಡಿ ಮತ್ತು ಟ್ಯಾಂಗ್ಯಾನಕೋಡಿ ಗ್ರಾಮಸ್ಥರ ಅನುಕೂಲಕ್ಕಾಗಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಚಿಕ್ಕೋಡಿಯ ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರ ವಿಶೇಷ ಪ್ರಯತ್ನ ಮತ್ತು ಮುತುವರ್ಜಿಯಿಂದ ಈ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಬರೋಬ್ಬರಿ 1 ಕೋಟಿ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ. ಹಿರೇಕೋಡಿ ಗ್ರಾಮದಿಂದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಭರಮ ಖಿಂಡಿ ಮುಖಾಂತರ ಟ್ಯಾಂಗ್ಯಾನಕೋಡಿ ಸಂಪರ್ಕಿಸುವ ರಸ್ತೆ ಸುಧಾರಣೆ ಕಾಮಗಾರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಥಳೀಯ ಮುಖಂಡರು ಈ ಭಾಗದ ರಸ್ತೆ ಸುಧಾರಣೆಯಾಗುತ್ತಿರುವುದರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ, ಶಾಲಾ ಸಿಬ್ಬಂದಿ ವರ್ಗದವರಿಗೆ ಹಾಗೂ ಹಿರೇಕೋಡಿ ಮತ್ತು ಟ್ಯಾಂಗ್ಯಾನಕೋಡಿ ಗ್ರಾಮಸ್ಥರ ಸುಗಮ ಸಂಚಾರಕ್ಕೆ ಹಾದಿ ಸುಗಮವಾಗಲಿದೆ. ಗ್ರಾಮೀಣ ಭಾಗದ ಜನಸಾಮಾನ್ಯರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ಅನುದಾನ ಮಂಜೂರು ಮಾಡಿಸಿದ ನಾಯಕರಾದ ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಅವರಿಗೆ ಇಡೀ ಗ್ರಾಮಸ್ಥರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ” ಎಂದರು.

ಈ ಸಂದರ್ಭದಲ್ಲಿ ಸುರೇಶ ಚೌಗಲಾ, ಪ್ರಲ್ಹಾದ ಪಾಂಡವ, ರಾಜು ಬಾಳಿಕಾಯಿ, ದಾದಾ ಪಟೇಲ್, ಅಜೀತ ಘೋಸರವಾಡೆ, ಅನ್ಸಾರ ಮುಜಾವರ, ನಿಜಮ ಪಟೇಲ್, ರಾಮಾ ಬಂಡಗರ, ಗಣಪತಿ ಮಾಳಿ, ಸುಕುಮಾರ ಘಾಟಗೆ, ಅಜರುದ್ದಿನ ಪಟೇಲ್, ಬಾಳಸಾಹೇಬ ಮಾಳಿ, ಬಾಬಾಸಾಹೇಬ ಗುಡಮನಿ, ರಿಯಾಜ್ ಮುಜಾವರ, ಇಮ್ರಾನ್ ಜಮಾದಾರ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಪ್ರಮುಖ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!