Dharwad

RSS ರಾಜ್ಯದಲ್ಲಿ ಅಷ್ಟೇ ಇಲ್ಲ ದೇಶವ್ಯಾಪಿ ಕಾರ್ಯ‌ನಿರ್ವಹಿಸುತ್ತಿದೆ..

Share

ರಾಜ್ಯದ ಗೃಹ ಇಲಾಖೆಯ ಸಚಿವರಾಗಿರುವ ಪ್ರಿಯಾಂಕ್ ಖರ್ಗೆಯವರು, ರಾಜ್ಯಕ್ಕೆ ಮಾತ್ರ ಅವರು ಗೃಹ ಮಂತ್ರಿಯಾಗಿದ್ದಾರೆ ಅಷ್ಟೇ ದೇಶಕ್ಕೆ ಗೃಹ ಸಚಿವರಲ್ಲ. RSS ವಿಚಾರದಲ್ಲಿ ಅವರ ನಡೆ ವರ್ತನೆ ನೋಡಿದ್ದರೆ ದೇಶಕ್ಕೆ ನಾನು ಗೃಹ ಮಂತ್ರಿ ಅನ್ನೋ ರೀತಿಯಿದೆ. ಸಂಘ ದೇಶವ್ಯಾಪಿ ಕಾರ್ಯನಿರ್ವಹಿಸುತ್ತಿದೆ, ಇದರ ರಿಜಿಸ್ಟರ ಕೇಂದ್ರ ಗೃಹ ಇಲಾಖೆಗೆ ಬರುತ್ತದೆ ಎಂದು ಶ್ರೀರಾಮ‌ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಟಾಂಗ್ ನೀಡಿದ್ದಾರೆ.

ಈ ಕುರಿತು ಧಾರವಾಡದಲ್ಲಿ ಮಾಧ್ಯಮಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ರಾಜ್ಯ ಗೃಹ ಸಚಿವ ಪ್ರಿಯಾಂಕ್ ಅವರು, ಆರ್ ಎಸ್ ಎಸ್ ನ ಮುಖ್ಯಸ್ಥ ಮೋಹನ್ ಬಾಗವತ್ ರಿಗೆ ಪತ್ರ ಬರೆದಿದ್ದಾರೆ. ಪತ್ರದ ಕುರಿತು ವಾದ, ವಿವಾದ, ಸರಿ, ತಪ್ಪು ಚರ್ಚೆ ನಡೀತಾಯಿದೆ. ಈಗ ನಾನು ಇವತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಸಂಘದ ಕಾರ್ಯಕರ್ತರನಾಗಿ ಪತ್ರ ಬರೀತಾಯಿದ್ದೇನೆ. ಆರ್ ಎಸ್ ಎಸ್ ಅನ್ನೋದ ಕರ್ನಾಟಕಕ್ಕೆ ಸೀಮಿತ ಸಂಘಟನೆ ಅಲ್ಲ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಸ್ವಯಂ ಸೇವಕ ಸಂಘಟನೆ. ದೇಶದ ಎಲ್ಲ ರಾಜ್ಯಗಳಲ್ಲಿ ಅರ್ ಎಸ್ ಎಸ್ ಕಾರ್ಯ ನಿರ್ವಹಿಸ್ತಾಯಿದೆ. ಸಂಘದ ರಿಜಿಸ್ಟರ್, ನೊಂದಣಿ ಬಗ್ಗೆ ಕೇಂದ್ರ ಸರ್ಕಾರ ಕೇಳಬೇಕು. ಇದು ಮೊದಲು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಗೊತ್ತಿರಬೇಕು. ನೀವು ಕೇವಲ 700 ಕೋಟಿ‌ ಜನರಿಗೆ ಗೃಹ ಮಂತ್ರಿ, ಆದರೆ ಆರ್ ಎಸ್ ಎಸ್ 140 ಕೋಟಿ ಜನರ ಕೆಲಸ ಮಾಡ್ತಾಯಿದೆ. ದೇಶದಲ್ಲಿ ಆರ್ ಎಸ್ ಎಸ್ ಸೇರಬೇಕೆಂಬ ವಾತಾವರಣವಿದೆ, ಹೊರತು ಕಾಂಗ್ರೆಸ್ ಸೇರಬೇಕಂತಲ್ಲ. ಪ್ರಿಯಾಂಕ್ ಖರ್ಗೆ ಹಿಂದೆ ಹಿಂದೂ ವಿರೋಧಿ ಶಕ್ತಿಯಿದೆ. ಕಾಂಗ್ರೆಸ್ ನ ದೊಡ್ಡ ದೊಡ್ಡ ನಾಯಕರು ಖರ್ಗೆ ಹಿಂದೂ ವಿರೋಧಿ ನಡೆಗೆ ಶಕ್ತಿಯಾಗಿದ್ದಾರೆ. ಜತೆಗೆ ನೀವು ಸರ್ಕಾರದ ಪತ್ರ ಕಳಿಸಿದ್ದೀನಿ, ವೈಯಕ್ತಿಕ ಪತ್ರವಲ್ಲ ಅಂದಿದ್ದಿರ್ರಿ. ನೀವು ಕಳಿಸಿದ ಪತ್ರ ಸರ್ಕಾರದ್ದೇ ಅದರೆ ಸಿಎಂ ಏಕೆ ಮಾತಾಡ್ತಿಲ್ಲ. ವಿಧಾನಸೌಧದಲ್ಲೇ ಸಿಎಂ ಡಿಕೆಶಿ ಅವರು ಆರ್ ಎಸ್ ಎಸ್ ಗೀತೆ ಹಾಡಿದ್ದಾರೆ. ಸದಾ ವತ್ಸಲೇ ಗೀತೆ ಹಾಡಿದ ಸಿಎಂ ಅವರೇ ಮಾತಾಡ್ತಿಲ್ಲ. ಸಿಎಂಗೆ ಬೇಕಾದ ಸ್ವಯಂ ಸೇವಕ ಸಂಘದ ಗೀತೆ ನಿಮಗ್ಯಾಕೆ ಬೇಕಾಗಿಲ್ಲ.‌ ಆರ್ ಎಸ್ ಎಸ್ ಹೊರಗೆ ಇದ್ದು ನೀವು‌ ಮಾತಾಡೋದು ಶೋಭೆ ಅಲ್ಲ. ಒಂದು ಸಣ್ಣ ರಾಜ್ಯದ ಗೃಹ ಮಂತ್ರಿ ಆದ ನಿಮಗೆ ಯಾವುದೆ ಹಕ್ಕು ಇಲ್ಲ. 1975 ರಲ್ಲಿ ನೀವೇ ಸಂವಿಧಾನ ದೂಳಿಪಟ ಮಾಡಿದ್ದಿರ್ರಿ. ಕಾಂಗ್ರೆಸ್ ನವರಿಗೆ ಸಂವಿಧಾನದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಆರ್ಟಿಕಲ್ ನಲ್ಲಿ‌ 19 ನಲ್ಲಿ ನೊಂದಾವಣಿ ಮಾಡದೆಯೂ ಸಂಘ ನಡೆಸಬಹುದು ಅಂತಿದೆ, ನೀವು ಯಾವುದೇ ಮಾಹಿತಿ ಇಲ್ಲದೇ ಬಾಯಿಗೆ ಬಂದಗೆ ಮಾತಾಡ್ತಾಯಿದ್ದಿರ್ರಿ . ಗೃಹ ಮಂತ್ರಿ ಸ್ಥಾನಕ್ಕೆ ನೀವು ಅಗೌರವ ತರತಾಯಿದ್ದಿರ್ರೀ ಎಂದು ಹೇಳುವ ಮೂಲಕ ಖರ್ಗೆಯವರ ವಿರುದ್ಧ ಕಿಡಿಕಾರಿದರು.

ಜತೆಗೆ ಇದೇವೇಳೆ ಧರ್ಮಸ್ಥಳ ಪ್ರಕರಣದಲ್ಲಿ ಹಿರಿಯ ಚಿತ್ರನಟ ಪ್ರಕಾಸ್ ರೈ ಕೇಳಿ ಬಂದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುತಾಲಿಕ್ ಅವರು, ಬುರಡೆ ಚನ್ನಯ್ಯ ಹೈಕೋರ್ಟ್ ಗೆ ಅರ್ಜಿ ಹಾಕಿದ್ದರಲ್ಲಿ ಪ್ರಕಾಶ್ ರಾಜ್ ಹೆಸರು ಕೇಳಿ ಬಂದಿತ್ತು.‌ಇದರ ಕುರಿತು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಡೆಸಿ‌ಪ್ರಾಕಾಶ್ ಅವರು ಸ್ಪಷ್ಟನೆ ನೀಡುವ ವೇಳೆ ಅವರೇ ಒಪ್ಪಿಕೊಂಡಿದ್ದಾರೆ. ಮೊಹಂತಿ ಅವರಿಗೂ ಭೇಟಿ ನೀಡಿ ಸ್ಪಷ್ಟಿಕರಣ ಕೊಟ್ಟಿದ್ದೇನೆ ಎಂದಿದ್ದಾರೆ. ಕೂಡಲೇ ಎಸ್ಐಟಿ ಪ್ರಕಾಶ್ ರಾಜ್ ರನ್ನ ಬಂಧಿಸಬೇಕು. ನೀವು ನಾಸ್ತಿಕರು, ಹಿಂದೂ ವಿರೋಧಿಗಳು ಕಮ್ಯುನಿಸ್ಟ್ ಎಂದು ವಾಗ್ದಾಳಿ ನಡೆಸಿದರು. ‌

ಒಟ್ಟನಲ್ಲಿ ಇಂದು ಧಾರವಾಡದಲ್ಲಿ ಹಿಂದೂ ವಿರೋಧಿಗಳ ನಡಯ ವಿರುದ್ಧ ಶ್ರೀರಾಮ ಸೇನೆಯ ಮುಖ್ಯಸ್ಥ ಸುದ್ದಿಗೋಷ್ಠಿ ನಡೆಸಿ, ಈ ವೇಲಕೆ ಒ್ರಕಾಶ್ ರೈ ಅವರ ಭಾಚಿತ್ರ ಹರಿದು ಹಾಕುವ ಮೂಲಕ ಕಿಡಿಕಾರಿದ್ದಾರೆ.

Tags:

error: Content is protected !!