ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿನ ಜೀವಶಾಸ್ತ್ರ ವಿಭಾಗದ ಪ್ರೊಫೆಸರ್ ಪಿಹೆಚ್ಡಿ ವಿದ್ಯಾರ್ಥಿನಿ ಜೊತೆ ಲವ್ವಿಡವಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊನೆಗೂ ಎಚ್ಚೆತ್ತುಕೊಂಡಿರುವ ಕವಿವಿ ಆಡಳಿತ ಮಂಡಳಿಯು ಪ್ರೊಫೆಸರನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಹೌದು ಕಳೆದ ನಾಲ್ಕೈದು ದಿನಗಳಿಂದ ಕವಿವಿ ಪ್ರೊಫೆಸರ್ ದೇವರಾಜ್ ತಂಗುದೊರೈ ತನ್ನ ವಿಭಾಗದಲ್ಲಿ ಪಿಹೆಚ್ಡಿ ಮಾಡಲು ಬಂದಿದ್ದ ವಿದ್ಯಾರ್ಥಿನಿಯೊಂದಿಗೆ ಲವ್ವಿಡವಿ ಮೂಲಕ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ಇನ್ನೂ ವಿದ್ಯಾರ್ಥಿನಿಯೊಂದಿಗೆ ಪ್ರೊಫೆಸರ್ ಲವ್ವಿಡವಿ ವಿದ್ಯಾರ್ಥಿನಿ ಪೋಷಕರಿಗೆ ತಿಳಿದು ವ್ಯಾಸಂಗವನ್ನು ಮೊಟಕುಗೊಳಿಸಿ ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದರಂತೆ. ಇದರಿಂದ ಗಲಿಬಿಲಿ ಗೊಂಡಿದ್ದ ಪ್ರೊಫೆಸರ್ ದೇವರಾಜ್, ಲವ್ವಿಡವಿಯ ವಿದ್ಯಾರ್ಥಿನಿಯ ಜಿಲ್ಲೆಯಿಂದ ಜೀವಶಾಸ್ತ್ರ ವಿಭಾಗಕ್ಕೆ ಯುವಕ ಪಿಹೆಚ್ಡಿ ಮಾಡುಲು ಬಂದಿದ್ದಾನೆ, ಇದನ್ನು ಅರಿತು ಕೈ ಬಿಟ್ಟು ಹೋದ ವಿದ್ಯಾರ್ಥಿನಿ ಸಂಪರ್ಕಿಸಿಕೊಡುವಂತೆ ಪ್ರೊಫೆಸರ್ ಕಿರುಕುಳ ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಜತೆಗೆ ಸೊಸಿಯಲ್ ಮೀಡಿಯಾದಲ್ಲಿ ಕೂಡಾ ವಿದ್ಯಾರ್ಥಿನಿ ಹಾಗೂ ಪ್ರೊಫೆಸರ್ ಪೋಟೋಗಳು ವೈರಲಾಗಿವೆ. ಈ ಬೆಳವಣಿಗೆ ನಡುವೆ ಪ್ರೊಫೆಸರ್ನನ್ನು ಅಮಾನತು ಮಾಡಲು ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳ ಆಕ್ರೋಶ ಹೆಚ್ಚಾಗಿದನ್ನು ಗಮನಿಸಿ, ಈಗ ಕವಿವಿ ಆಡಳಿತ ಮಂಡಳಿ ಪ್ರೊಫೆಸರ್ ಅಮಾನತು ಮಾಡಿ ಆದೇಶ ಹೊರಡಿಸಿದೆ.

