BELAGAVI

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಪಾಸ್ ಮಾಡಲು ಕಾನೂನಿನ ದೃಷ್ಟಿಯಿಂದ ಯಾವುದೇ ತೊಡಕಿಲ್ಲ; ಹೈಕೋರ್ಟ್ ನ್ಯಾಯವಾದಿ ಮೋಹನ್ ಕಾತರಕಿ

Share

ಬೆಳಗಾವಿ ಮಹಾನಗರ ಪಾಲಿಕೆಯೂ ಭಾರತೀಯ ಮುನ್ಸಿಪಲ್ ಕಾನೂನಿನ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿದೆ. ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳುವ ನಿರ್ಧಾರವನ್ನು ಸಂಸತ್ತು ಕೈಗೊಂಡಿದೆ. ಬೆಳಗಾವಿ ಮಹಾನಗರ ಪಾಲಿಕೆ ಕರ್ನಾಟಕದಲ್ಲೇ ಇದ್ದು, ಬೆಳಗಾವಿಯನ್ನು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಪಾಸ್ ಮಾಡಲು ಕಾನೂನಿನ ದೃಷ್ಟಿಯಿಂದ ಯಾವುದೇ ತೊಡಕಿಲ್ಲ ಎಂದು ಸುಪ್ರೀಂಕೋರ್ಟಿನ ಹಿರಿಯ ನ್ಯಾಯವಾದಿಗಳಾದ ಮೋಹನ್ ಕಾತರಕಿ ಅವರು ಹೇಳಿದರು.

ಇಂದು ಬೆಳಗಾವಿಯಲ್ಲಿ ಕರೆಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಸುಪ್ರೀಂಕೋರ್ಟಿನ ಹಿರಿಯ ನ್ಯಾಯವಾದಿಗಳಾದ ಮೋಹನ್ ಕಾತರಕಿ ಅವರು ಮಾತನಾಡಿದರು. ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳುವ ನಿರ್ಧಾರವನ್ನು ಸಂಸತ್ತು ಕೈಗೊಂಡಿದೆ. ಬೆಳಗಾವಿ ಮಹಾನಗರ ಪಾಲಿಕೆ ಕರ್ನಾಟಕದಲ್ಲೇ ಇದ್ದು, ಬೆಳಗಾವಿಯನ್ನು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಪಾಸ್ ಮಾಡಲು ಕಾನೂನಿನ ದೃಷ್ಟಿಯಿಂದ ಯಾವುದೇ ತೊಡಕಿಲ್ಲ. ಮಹಾನಗರ ಪಾಲಿಕೆಯೂ ಭಾರತೀಯ ಮುನ್ಸಿಪಲ್ ಕಾನೂನಿನ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿದೆ. ಠರಾವು ಪಾಸ್ ಮಾಡುವದನ್ನು ಮಹಾಪಾಲಿಕೆಯೂ ತಪ್ಪೆಂದು ತಿಳಿದುಕೊಳ್ಳಬಾರದು. ಗಡಿ ವಿವಾದವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ರಾಜ್ಯ ಸರ್ಕಾರ ತನ್ನ ಪಕ್ಷವನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಮಂಡಿಸುತ್ತಿದೆ. ಅಹಿಂಸಾ ಮಾರ್ಗವಾಗಿ ಕನ್ನಡ ಸಂಘಗಳು ಹೇರುವ ಒತ್ತಡಗಳ ಪರಿಣಾಮ ಸರ್ಕಾರದ ಮೇಲಿರಲಿದೆ. ಸದಾ ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸವನ್ನು ಮಾಡಬೇಕಿದೆ. ಸಮಯ ಬಂದಾಗ ರಾಜ್ಯದ ವಿಭಜನೆಯಾಗಬಹುದು. ಭಾಷಿಕ ಅಲ್ಪಸಂಖ್ಯಾತ ದೃಷ್ಟಿಯಿಂದ ವಿಭಾಗಹಿಸಬಹುದು. ಆದರೇ, ಬೆಳಗಾವಿ ಕನ್ನಡಿಗರ ಭೂಮಿ. ಇದು ಬೆಳಗಾವಿಯಲ್ಲಿಯೇ ಉಳಿಯಬೇಕು ಎಂದರು.

ಬೆಳಗಾವಿಯಲ್ಲಿ ಮೊದಲೂ ಕನ್ನಡ ಮರಾಠಿಗರ ಸಂಖ್ಯೆ ಸಮಾನವಾಗಿತ್ತು. ಮಹಾಪಾಲಿಕೆಯಲ್ಲಿ ಠರಾವು ಮಂಜೂರು ಮಾಡಿದರೂ ಯಾವುದೇ ವ್ಯತ್ಯಾಸವಾಗಲ್ಲ. ಮಹಾನಗರ ಪಾಲಿಕೆಗೆ ಸರ್ಕಾರದ ಕಾನೂನಿನ ಸಲಹೆಯನ್ನು ಪಡೆಯಬೇಕು. ಇನ್ನು ಠರಾವು ಪಾಸ್ಇ ಮಾಡುವುದನ್ನು ರಾಜಕೀಯವಾಗಿ ತಿರ್ಮಾನಿಸುವುದು. ಠರಾವು ಪಾಸ್ ಮಾಡುವುದರಿಂದ ಜನರಲ್ಲಿ ಜಾಗೃತಿ ಮೂಡಲಿದೆ. ಮರಾಠಿಗರ ಸಂಖ್ಯಾಬಲ ಇದ್ದಾಗ ಅವರು ಮರಾಠಿಗರ ಪರ ಪಾಸ್ ಮಾಡಿರುವ ಠರಾವನ್ನು ರದ್ಧುಗೊಳಿಸಲು ಇದು ಪೂರಕವಾಗಿದೆ ಎಂದರು.

ಕಾನೂನಾತ್ಮಕವಾಗಿ ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರ್ಪಡಿಸುವುದನ್ನು ಪ್ರಶ್ನಿಸುವುದು ತಪ್ಪು. ಮಹಾನಗರ ಪಾಲಿಕೆ ಕರ್ನಾಟಕ ಸರ್ಕಾರದ ಆಧೀನದಲ್ಲಿದ್ದು, ಹೀಗಿರುವಾಗ ಕರ್ನಾಟಕ ಸರ್ಕಾರದ ವಿರುದ್ಧ ಠರಾವು ಪಾಸ್ ಮಾಡಿದ್ದು ತಪ್ಪು. ಈ ಹಿನ್ನೆಲೆ ಕಳೆದ ಬಾರಿ ಮಹಾನಗರ ಪಾಲಿಕೆಯನ್ನು ವಿಸರ್ಜಿಸಲಾಗಿತ್ತು. ಕರ್ನಾಟಕದ ಪರ ಠರಾವು ಪಾಸ್’ನಿಂದ ಯಾವುದೇ ತರಹದ ಪರಿಣಾಮ ಬೆಳಗಾವಿಗೆ ಆಗಲ್ಲ ಎಂದರು.

ಇನ್ನು ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ. ರಾಜ್ಯ ಕೂಡ ದೊಡ್ಡದಾಗಿದೆ. ಅಭಿವೃದ್ಧಿಯ ಹಿತದೃಷ್ಠಿಯಿಂದ ವಿಂಗಡಣೆ ಮಾಡಿದರೇ, ಒಳ್ಳೆಯದು. ಸಂಪೂರ್ಣ ರಾಜ್ಯದಲ್ಲಿ ಆಡಳಿತದ ಸಮಸ್ಯೆಯಿದೆ. ನೀರಾವರಿ ಸಮಸ್ಯೆ ಎಲ್ಲೆಡೆ ಇದೆ. ದಕ್ಷಿಣ ಕರ್ನಾಟಕದವರು ಕಾವೇರಿ ಮತ್ತು ಉತ್ತರ ಕರ್ನಾಟಕವರು ಕೃಷ್ಣಾ ಯೋಜನೆಗಳು ಹಲವಾರು ವರ್ಷಗಳಿಂದ ಬಾಕಿಯಿದೆ. ನ್ಯಾಯಾಲಯದಲ್ಲಿ ಇನ್ನು ವ್ಯಾಜ್ಯವಿದೆ. ರಾಜ್ಯದ 2 ವಿಭಾಗದಲ್ಲಿಯೂ ಅಸಮಾಧಾನವಿದೆ. ಅಭಿವೃದ್ಧಿಯ ದೃಷ್ಠಿಯಿಂದ ವಿಂಗಡನೆಯ ವಿಚಾರ ಉತ್ತಮವಾಗಿದೆ ಎಂದರು.

ಇನ್ನು ಗಡಿವಿವಾದ ವಿಚಾರಣೆ ಇನ್ನು ನ್ಯಾಯಾಲಯದಲ್ಲಿ ಬಾಕಿಯಿದೆ. ಮೆಂಟೆನ್ ಅಂತ ನ್ಯಾಯಾಲಯವು ಹೇಳಿದರೇ, ಮುಂದೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಾರೆ. ನಂತರ ವಿಚಾರಣೆ ನಡೆಸಲಾಗುತ್ತದೆ ಎಂದರು.

ಇನ್ನು ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಯೋಜನೆಗೆ ಸಂಬಂಧಿಸಿದಂತೆ 1956 ರಲ್ಲಿದ್ದ ಪರಿಸ್ಥಿತಿ ಈಗೀಲ್ಲ. ಬೆಳಗಾವಿಯಲ್ಲಿ ಕನ್ನಡಿಗರ ಸಂಖ್ಯೆ ಈಗ ಹೆಚ್ಚಾಗಿದೆ. ನಮ್ಮ ರಾಜ್ಯಕ್ಕೆ ಬಂದು ಮಹಾರಾಷ್ಟ್ರದ ಯೋಜನೆಯ ಲಾಭ ಪಡೆಯಲು ಮರಾಠಿಗರು ಎಂದು ಪ್ರಮಾಣಪತ್ರ ನೀಡುವುದು ತಪ್ಪು. ರಾಜ್ಯ ಸರ್ಕಾರ ಈ ಕುರಿತು ಮಹಾರಾಷ್ಟ್ರ ಸರ್ಕಾರಕ್ಕೆ ಪ್ರಶ್ನೆ ಮಾಡಬೇಕು. ಇಲ್ಲಿರುವ ಜನರಿಗೆ ಸೌಲಭ್ಯ ಒದಗಿಸುವುದು ಕರ್ನಾಟಕ ರಾಜ್ಯದ ಜವಾಬ್ದಾರಿಯಾಗಿದೆ ಎಂದರು.

ಮಾಧ್ಯಮಗೋಷ್ಟಿಯಲ್ಲಿ ಕನ್ನಡ ಹೋರಾಟಗಾರರಾದ ಅಶೋಕ್ ಚಂದರಗಿ, ತಾಳೂಕರ, ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!