Vijaypura

ರಾಜ್ಯಕ್ಕೆ ನೀರಾವರಿಗೆ, ವಿದ್ಯುತ್ ಗೆ, ಕೆ ಅಯ್ ಡಿಬಿಗೆ ಭೂಮಿ ಕೊಟ್ಟವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಜನ

Share

ರಾಜ್ಯಕ್ಕೆ ನೀರಾವರಿಗೆ, ವಿದ್ಯುತ್ ಗೆ, ಕೆ ಅಯ್ ಡಿಬಿಗೆ ಭೂಮಿ ಕೊಟ್ಟವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಜನ ಇದಕ್ಕೆ ಬಸವಣ್ಣ ನವರ ಕೃಪೆಯ ಕಾರಣ ಎಂದು ಮಾಜಿ ಸಚಿವ ಹಾಗೂ ಶಾಸಕ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ತೆಲಗಿ ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ಹಮ್ಮಿಕೊಂಡ 22 ಕೆ ವಿ ಎ, ಯ 110/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮತಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದೇವೆ. ಮುಳವಾಡ ಏತ ನೀರಾವರಿ , ತೆಲಗಿಯಲ್ಲಿ ವಿದ್ಯುತ್ ವಿತರಣಾ ಕೇಂದ್ರದ ಮಾಡಲು ಭೂಮಿ ಪೂಜೆ ನೆರವೇರಿಸಲಾಗಿದೆ.

ಜಮೀನಯಳಗಲ್ಲಿ ಲೈನ್ ಎಳೆಯಲು ಯಾರು ತೊಂದರೆ ಮಾಡಬಾರದು. ಬರುವ ದಿನಗಳಲ್ಲಿ ರೈತರಿಗೆ ನೀರುಣಿಸಲು ಯಾವುದೇ ವಿದ್ಯುತ್ ನ ತೊಂದರೆಯಾಗುವುದಿಲ್ಲ. ಕರ್ನಾಟಕ ರಾಜ್ಯ ಇಡೀ ದೇಶದಲ್ಲಿ ರೈತರಿಗೆ ಉಚಿತ ವಿದ್ಯುತ್ ನ್ನು ಕೊಡತಾಯಿದೆ. ಹೀಗಾಗಿ ಸುಭಿಕ್ಷ ರಾಜ್ಯವಾಗಿದೆ. ಕಬ್ಬಿಗೆ 300 ಹಣವನ್ನು ಸಿದ್ದರಾಮಯ್ಯ ಸರ್ಕಾರ ಕೊಟ್ಟಿದೆ. ತೊಗರಿ,ಮೆಕ್ಕೆಜೋಳಗೆ ಬೆಂಬಲ ಬೆಲೆ ನೀಡಿದ್ದೇವೆ. ಇವತ್ತು ದ್ರಾಕ್ಷಿಗೂ ಕೂಡಾ ಒಳ್ಳೆಯ ಬೆಲೆ ಇದೆ. ಆದರೆ ರೈತರು ಒಂದೇ ಬೆಳೆ ಬೆಳೆದು ನಷ್ಟ ಅನುಭವಿಸುವ ಬದಲು ಪರ್ಯಾಯವಾಗಿ ಬೇರೆ ಬೇರೆ ಬೆಳೆಯನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.

ಎಣ್ಣೆ , ಆಹಾರ ವಸ್ತುಗಳ ವಿದೇಶಗಳ ಮೇಲೆ ಅವಲಂಬಿತ್ರಾಗದೆ ನಮ್ಮ ದೇಶದಲ್ಲಿ ಬೆಳೆದು ಸ್ವಾವಲಂಬಿಗಳಾಗಬೇಕು. 3 ವರ್ಷ ಸಚಿವನಾಗಿ ಜನರಿಗೆ ಕಡಿಮೆ ಸಿಕ್ಕಿದ್ದೇನೆ. 312 ಎಕರೆ 5000 ಕೋಟಿ ಸರ್ಕಾರಕ್ಕೆ ಕೊಡಿಸಿದ್ದೇನೆ. ಪ್ರತಿ ಟನ್ ಕಬ್ಬಿಗೆ 300 ರೂಪಾಯಿ ರೈತರಿಗೆ ಕೊಡಿಸಿದ್ದೇನೆ. ಸತ್ತು ಹೋದ ಜವಳಿ, ಕಬ್ಬು, ಎ ಪಿಎಂಸಿ ಇಲಾಖೆಗೆ ಜೀವ ತುಂಬಿ ಬಂದಿದ್ದೇನೆ. ಬರುವ ದಿನಗಳಲ್ಲಿ ಕೂಡಗಿಗೆ ಈರುಳ್ಳಿ ಅಂತಾರಾಷ್ಟ್ರೀಯ ಮಾರುಕಟ್ಟೆ ಮಾಡಲು ಶ್ರಮಿಸುತ್ತೇನೆ ಎಂದರು.
ಕಾಂಗ್ರೆಸ್ ಸರ್ಕಾರ ಬಂದ ನಂತರ ವಿಧ್ಯುತ್ ಬದಲಿಗೆ ಸೋಲಾರ , ವಿಂಡ್ ಪವರ್ ಪರ್ಯಾಯವಾಗಿ ಬಳಸಲಾಗುತ್ತಿದೆ ಇದು ರೈತರಿಗೆ .

ಒಬ್ಬ ಲೋಕಾಸಭಾ ಸದಸ್ಯ ಪೆಟ್ರೋಲ್, ಗೊಬ್ಬರ ದ ಬಗ್ಗೆ ಮಾತಾಡ್ತಾರಾ ಇದಕ್ಕೆಲ್ಲ ಪ್ರಧಾನ ಮಂತ್ರಿ ಮೋದಿ ಯವರೇ ಕಾರಣ. ಇಡೀ ದೇಶದಲ್ಲಿ ಬಡವರನ್ನು ಶ್ರೀಮಂತ ಗೊಳಿಸಿದ್ದು ಕರ್ನಾಟಕ ಸರ್ಕಾರ. ಬರುವ ದಿನಗಳಲ್ಲಿ ಮಸೂತಿ,ಚಿಮ್ಮಲಗಿ, ವಂದಾಲ ಗಳಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನೂ ಸ್ಥಾಪಿಸಲಾ ಗುವುದು.. ಕರೆಂಟ್ ಬಂತು ನೀರು ಕೂಡಾ ಸಿಗಬೇಕು. ಹೀಗಾಗಿ ಮೊದಲು ಮತಕ್ಷೇತ್ರದ ತುಂಬೆಲ್ಲ ಕರೆಂಟ್ ನ್ನೂ ಒದಗಿಸಲಾಗುವುದು ಎಂದರು.

 

Tags:

error: Content is protected !!