State

ರಸಗೊಬ್ಬರ ಕಾಳಸಂತೆ ಮಾರಾಟಗಾರರಿಗೆ ಸಚಿವ ಈಶ್ವರ್ ಖಂಡ್ರೆ ಖಡಕ್ ಎಚ್ಚರಿಕೆ!

Share

ರಸಗೊಬ್ಬರ ಕೊರತೆಗೆ ಕೇಂದ್ರ ಸರ್ಕಾರದ ಬೇಜವಾಬ್ದಾರಿತನ. ರೈತರಿಗೆ ಎದುರಾಗಿರುವ ರಸಗೊಬ್ಬರ ಕೊರತೆ ನೀಗಿಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಸಚಿವ ಈಶ್ವರ್ ಖಂಡ್ರೆ ಅವರು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿದರು. ನಿರೀಕ್ಷೆಯಷ್ಟು ಈ ಬಾರಿ ಮಳೆಯಾಗಿಲ್ಲ. ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ಮಹತ್ತರ ಚರ್ಚೆಯಾಗಿದೆ. ವಾರದೊಳಗೆ ಮಳೆ ಬಂದರೇ ಅನ್ನದಾತ ಖುಷಿಯಾಗಿರುತ್ತಾನೆ. ಕಳೆದ ಬಾರಿ ಪ್ರವಾಹದ ಹಿನ್ನೆಲೆ 350 ಕೋಟಿ ಪರಿಹಾರವನ್ನು ನೀಡಲಾಗಿದೆ. 240 ಕೋಟಿ ಬೆಳೆ ವಿಮೆಯನ್ನು ಬಿಡುಗಡೆ ಮಾಡಿಸಲಾಗಿದೆ. ಈ ಬಾರಿ ರಸಗೊಬ್ಬರದ ಕೊರತೆಯನ್ನು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದೆ. ಡಿ.ಎ.ಪಿ ಮತ್ತು ಗೊಬ್ಬರದ ಕೊರತೆಯಿದ್ದು, ಇದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಈ ಬಾರಿ ಕೇವಲ ಶೇ.30ರಷ್ಟು ಮಾತ್ರ ವಿತರಿಸಿರುವ ಮಾಹಿತಿಯಿದೆ. ರಾಜ್ಯ ಸರ್ಕಾರ ರೈತರಿಗೆ ಹೆಚ್ಚುವರಿ ಗೊಬ್ಬರ ತರಿಸಲು ಪ್ರಯತ್ನವನ್ನು ಮಾಡಲಾಗುತ್ತಿದೆ. ಅಂಗಡಿಕಾರರು ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೇ, ಕಠಿಣಕ್ರಮವನ್ನು ಕೈಗೊಳ್ಳಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.

Tags:

error: Content is protected !!