ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಈಗ ಹೊಸ ವೇಗ ಸಿಕ್ಕಿದೆ. ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಇಂದು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರವಾಸ ನಡೆಸಿ, ರಸ್ತೆ, ಚರಂಡಿ, ಸೇತುವೆ ಹಾಗೂ ದೇವಸ್ಥಾನ ಸೇರಿದಂತೆ ಕೋಟ್ಯಂತರ ರೂಪಾಯಿ ವೆಚ್ಚದ ಸರಣಿ ಕಾಮಗಾರಿಗಳಿಗೆ ಅಧಿಕೃತ ಚಾಲನೆ ನೀಡಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಮಗ್ರ ಪ್ರಗತಿಗಾಗಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ವಿವಿಧ ಗ್ರಾಮಗಳಲ್ಲಿ ಭರ್ಜರಿ ಪ್ರವಾಸ ನಡೆಸಿ ಸರಣಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಡಸ್ ಗ್ರಾಮದಿಂದ ಬೀದರಗಡ್ಡಿಗೆ ಸಂಪರ್ಕಿಸುವ 1.12 ಕೋಟಿ ರೂ. ವೆಚ್ಚದ ರಸ್ತೆ, ಬೆಂಡಿಗೇರಿ ಗ್ರಾಮದ 1.05 ಕೋಟಿ ರೂ. ವೆಚ್ಚದ ರಸ್ತೆ ಹಾಗೂ ಚರಂಡಿ ನಿರ್ಮಾಣ, ಮತ್ತು ಬಸರಿಕಟ್ಟಿ-ಮಾವಿನಕಟ್ಟಿ-ಹೊನ್ನಿಹಾಳ ಗ್ರಾಮಗಳನ್ನು ಜೋಡಿಸುವ 50 ಲಕ್ಷ ರೂ. ವೆಚ್ಚದ ಬಾಕ್ಸ್ ಕಲ್ವರ್ಟ್ ಸೇತುವೆ ಕಾಮಗಾರಿಗೆ ಅವರು ಭೂಮಿ ಪೂಜೆ ನೆರವೇರಿಸಿದರು. ಇದೇ ವೇಳೆ ಅರಳಿಕಟ್ಟಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಕಟ್ಟಡ ಕಾಮಗಾರಿಗಾಗಿ 20 ಲಕ್ಷ ರೂ. ಗಳ ಮೂರನೇ ಕಂತಿನ ಚೆಕ್ ಹಸ್ತಾಂತರಿಸಿದ ಅವರು, ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಹಾಗೂ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿಯಾಗಿಸುವ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು.


