BELAGAVI

ಬೆಳಗಾವಿ ಮಹಾನಗರ ಪಾಲಿಕೆ ಕಂದಾಯ ಸಿಬ್ಬಂದಿ ಪ್ರತಿಭಟನೆ: ಹೆಚ್ಚುವರಿ ಚುನಾವಣಾ ಕೆಲಸದ ಪ್ರಭಾರ ನೀಡದಂತೆ ಆಗ್ರಹಿಸಿ ಮಹಾಪೌರರಿಗೆ ಮನವಿ

Share

ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ವಲಯ ಸಿಬ್ಬಂದಿಗಳು ಹೆಚ್ಚುವರಿ ಕೆಲಸದ ಒತ್ತಡದಿಂದ ಬೇಸತ್ತು, ಮತಗಟ್ಟೆ ಮಟ್ಟದ ಅಧಿಕಾರಿಗಳ (BLO) ಮೇಲ್ವಿಚಾರಕರ ಪ್ರಭಾರವನ್ನು ತಕ್ಷಣವೇ ತೆರವುಗೊಳಿಸುವಂತೆ ಒತ್ತಾಯಿಸಿ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಮಹತ್ವದ ಮನವಿ ಸಲ್ಲಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ಸಿಬ್ಬಂದಿಗಳು ಈಗಾಗಲೇ ಆಸ್ತಿ ತೆರಿಗೆ ವಸೂಲಿ, ಜನಗಣತಿ, ಪಾರ್ಕಿಂಗ್ ನಿರ್ವಹಣೆ, ಬ್ಯಾನರ್ ತೆರವು ಹಾಗೂ ಪರಿಹಾರ ಕೇಂದ್ರಗಳ ಮೇಲ್ವಿಚಾರಣೆಯಂತಹ ಪ್ರಮುಖ ಮೂಲ ಕರ್ತವ್ಯಗಳಲ್ಲಿ ನಿರತರಾಗಿದ್ದಾರೆ. ಇದರ ಜೊತೆಗೆ ಪ್ರಸ್ತುತ ಎಸ್.ಐ.ಆರ್ ಕೆಲಸಗಳು ಆರಂಭವಾಗಿರುವುದರಿಂದ ಕಾರ್ಯದೊತ್ತಡ ಮತ್ತಷ್ಟು ಹೆಚ್ಚಾಗಿದೆ. ಇದರ ನಡುವೆ ನೀಡಿರುವ ಹೆಚ್ಚುವರಿ ಮತಗಟ್ಟೆ ಮಟ್ಟದ ಮೇಲ್ವಿಚಾರಕರ (BLO) ಜವಾಬ್ದಾರಿಯಿಂದಾಗಿ ಕಂದಾಯ ಶಾಖೆಯ ಮೂಲ ಕೆಲಸಗಳನ್ನು ನಿಭಾಯಿಸಲು ಸಮಯವಿಲ್ಲದಂತಾಗಿದೆ. ಮೇಲಧಿಕಾರಿಗಳ ತೀವ್ರ ಒತ್ತಡದಿಂದಾಗಿ ಸಿಬ್ಬಂದಿಗಳು ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ಈ ಹೆಚ್ಚುವರಿ ಪ್ರಭಾರದಿಂದ ತಮಗೆ ಮುಕ್ತಿ ನೀಡಬೇಕೆಂದು ಕಂದಾಯ ಸಿಬ್ಬಂದಿಗಳು ವಿನಂತಿಸಿದ್ದಾರೆ. ಈ ಕುರಿತಾದ ಮನವಿಯನ್ನು ಮಹಾಪೌರರಾದ ಪ್ರೀತಿ ಕಾಮಕರ್ ಅವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಂದಾಯ ಶಾಖೆಯ ಪ್ರಮುಖರಾದ ಯಲ್ಲೇಶ ಬಚ್ಚಲಪುರಿ, ಸಾಗರ್ ಕಾಂಬಳೆ, ಬಿ.ಎಸ್. ಕೋಲಕಾರ್, ಪಿ.ಆರ್. ಪಾಟೀಲ್, ಎಲ್.ಸಿ. ಕಲಪತ್ರಿ, ಪಿ.ಎಸ್. ನಾಯ್ಕ್, ಪಿ.ಓ. ಹಲಗೇಕರ್, ಬಿ.ಪಿ. ಹೂವನ್ನವರ, ಜಿ.ಎ. ಪಾಲಕರ, ಎಸ್.ಬಿ. ಓಸಿ ಸೇರಿದಂತೆ ಇನ್ನುಳಿದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:

error: Content is protected !!