BELAGAVI

“ಅಭಿವೃದ್ಧಿಯೇ ನಮ್ಮ ಕನಸು, ಸಿದ್ದರಾಮಯ್ಯ ಎಂದಿಗೂ ಏಕಾಂಗಿಯಲ್ಲ”: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ!

Share

ಮಾಜಿ ಸಿಎಂ ಸಿದ್ಧರಾಮಯ್ಯ ಎಂದಿಗೂ ಏಕಾಂಗಿಯಾಗಿಲ್ಲ. ಈ ತಿಂಗಳಲ್ಲೇ ಸಂಪುಟ ವಿಸ್ತರಣೆ ಸಾಧ್ಯತೆಯಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು ತಾವು ಲೋಕೋಪಯೋಗಿ ಖಾತೆಯನ್ನೇ ನೀಡಬೇಕೆಂದು ಕೇಳಿರಲಿಲ್ಲ, ಆದರೆ ತಮ್ಮ ಕೆಲಸದ ವೈಖರಿ ನೋಡಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ಇದೇ ಖಾತೆಯನ್ನು ಮುಂದುವರೆಸಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಹೊಸ ರಸ್ತೆ, ಸೇತುವೆ ಹಾಗೂ ಬೆಳಗಾವಿ ಫ್ಲೈಓವರ್ ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡುವುದು ನಮ್ಮ ಕನಸಾಗಿದೆ ಎಂದ ಅವರು, ಸದ್ಯದಲ್ಲೇ ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದರು. ಸಂಪುಟದಲ್ಲಿ ಇನ್ನೂ 20 ಸ್ಥಾನಗಳು ಖಾಲಿಯಿದ್ದು, ಜುಲೈನಲ್ಲಿ ಅಧಿವೇಶನವಿರುವ ಹಿನ್ನೆಲೆಯಲ್ಲಿ ಈ ತಿಂಗಳಿನಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಮಾತನಾಡಿ, ಪಕ್ಷದ ‘ಒಬ್ಬರಿಗೆ ಒಂದೇ ಹುದ್ದೆ’ ನಿಯಮದಂತೆ ನಡೆದುಕೊಳ್ಳಲಾಗುತ್ತಿದ್ದು, ಮುಸ್ಲಿಂ ನಾಯಕರ ಬೇಡಿಕೆಗಳನ್ನು ವರಿಷ್ಠರ ಗಮನಕ್ಕೆ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರ ನೇತೃತ್ವದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು ಎಂದಿಗೂ ಏಕಾಂಗಿಯಲ್ಲ, ನಾವೆಲ್ಲರೂ ಅವರೊಂದಿಗಿದ್ದೇವೆ ಮತ್ತು ಖಾತೆ ಹಂಚಿಕೆಯ ಸಣ್ಣಪುಟ್ಟ ಗೊಂದಲಗಳನ್ನು ಅವರೇ ಬಗೆಹರಿಸಲಿದ್ದಾರೆ ಎಂದರು. ಅಶೋಕಪಟ್ಟಣ್ ಸೇರಿದಂತೆ ನಾವೆಲ್ಲರೂ ಒಂದೇ ಗರಡಿಯವರಾಗಿದ್ದು, ಅಹಿಂದ್ ಸಂಘಟನೆಗೆ ನಮ್ಮ ಬೆಂಬಲ ಸದಾ ಇರಲಿದೆ ಎಂದು ಪುನರುಚ್ಚರಿಸಿದರು.

ಇನ್ನು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ‘ಮಹಾಜನ ವರದಿ ಅಂತಿಮ ಠರಾವು’ ಪಾಸ್ ಮಾಡಲು ಆಗುತ್ತಿರುವ ವಿಳಂಬಕ್ಕೆ ಅಲ್ಲಿನ ಬಿಜೆಪಿ ಶಾಸಕರೇ ನೇತೃತ್ವ ವಹಿಸಿ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದು ತಿರುಗೇಟು ನೀಡಿದ ಸಚಿವರು, ಈ ಕುರಿತು ನಾಳೆ ಜಿಲ್ಲಾಧಿಕಾರಿಗಳೊಂದಿಗೆ ಖುದ್ದಾಗಿ ಚರ್ಚಿಸುವುದಾಗಿ ತಿಳಿಸಿದರು. ಬೈಟ್

Tags:

error: Content is protected !!