BELAGAVI

ಬೆಳಗಾವಿ ಐಎಂಎ ಸಮಾವೇಶ: ಕಾಲಕ್ಕೆ ತಕ್ಕಂತೆ ವೈದ್ಯರು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಡಾ. ಪ್ರಭಾಕರ ಕೋರೆ ಕರೆ

Share

ಬೆಳಗಾವಿಯ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಶಾಖೆಯು ಜೆಎನ್‌ಎಂಸಿ ಮತ್ತು ಕೆಎಎಚ್‌ಇಆರ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಸಹಯೋಗದೊಂದಿಗೆ ವಾರ್ಷಿಕ ಸಿಎಂಇ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಅಳವಡಿಕೆಯ ಅನಿವಾರ್ಯತೆಯನ್ನು ಪ್ರತಿಪಾದಿಸಿದರು.

ಬೆಳಗಾವಿಯ ಫೇರ್‌ಫೀಲ್ಡ್ ಬೈ ಮ್ಯಾರಿಯಟ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ “Bridging Knowledge and Practice” ಧೇಯವಾಕ್ಯದ ಇಐಎಂಎ ವಾರ್ಷಿಕ ಸಿಎಂಇ 2025-26 ಸಮಾವೇಶವನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆಎಎಚ್‌ಇಆರ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಬೆಳಗಾವಿಯ ಹಳೆಯ ಮತ್ತು ಹೊಸ ವೈದ್ಯಕೀಯ ಪದ್ಧತಿ ಎರಡನ್ನೂ ಕಂಡ ಭಾಗ್ಯವಂತ ನಾನಾಗಿದ್ದು, ಹೊಸ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆ ಹಾಗೂ ರೋಬೋಟಿಕ್ ಸರ್ಜರಿಗಳಂತಹ ಕಾರ್ಯಗಳಿಗೆ ಪೂರಕವಾಗಿ ವೈದ್ಯರು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಬೇಕು ಎಂದು ಕರೆ ನೀಡಿದರು.

ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಡಾ. ಸಿದ್ದು ಹುಲ್ಲೋಳ್ಳಿ ಅವರು ಮಾತನಾಡಿ, ಎಐ ತಂತ್ರಜ್ಞಾನವು ಮಾನವ ಸಂಪನ್ಮೂಲವನ್ನು ತಗ್ಗಿಸುತ್ತಿರುವ ಈ ಹಿನ್ನೆಲೆಯಲ್ಲಿ ಬದಲಾವಣೆಯನ್ನು ರೂಢಿಸಿಕೊಳ್ಳಬೇಕು ಎಂದರಲ್ಲದೆ, ಹಲವಾರು ಕೆಲಸ ಕಾರ್ಯಗಳು ಎಐ ಕೃತಕ ಬುದ್ಧಿಮತ್ತೆ ಮೂಲಕವೇ ನಡೆಯುತ್ತಿವೆ. ಮಾನವ ಸಂಪನ್ಮೂಲವನ್ನು ಇದು ತಗ್ಗಿಸುತ್ತಿದೆ. ಸಮಾಜಕ್ಕೆ ಗುಣಮಟ್ಟದ ವೈದ್ಯರ ಆವಶ್ಯಕತೆಯಿದೆ. ವೈದ್ಯರು ರೋಗಿಗಳಿಗೆ ಸ್ಪಂದನೆ ನೀಡುವಂತಾಗಬೇಕು. ಇದೇ ವೇಳೆ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರ ವೈದ್ಯಕೀಯ, ಶಿಕ್ಷಣ, ಸಾಮಾಜೀಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಕೆಎಎಚ್‌ಇಆರ್ ಗೌರವಾನ್ವಿತ ಉಪಕುಲಪತಿಗಳಾದ ಡಾ. ಸಂದೀಪ್ ಶ್ರೀವಾಸ್ತವ ಅವರು ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಬೃಹತ್ ಸಮಾವೇಶದ ಯಶಸ್ಸಿನ ಹಿಂದೆ ಐಎಂಎ ಪದಾಧಿಕಾರಿಗಳು ಹಾಗೂ ಸಂಘಟನಾ ಸಮಿತಿಯ ಪ್ರಮುಖರು ಶ್ರಮಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಡಾ. ಹೇಮಂತ್ ಕೌಜಲಗಿ, ಕಾರ್ಯದರ್ಶಿ ಡಾ. ರಾಘವೇಂದ್ರ ಡಿ. ಸಾಗರ್, ಖಜಾಂಚಿ ಡಾ. ಕೇದಾರೇಶ್ವರ ಕೆ.ಎಸ್., ಸಿಎಂಇ ಚೇರ್ಮನ್ ಡಾ. ವಿಕ್ರಾಂತ್ ಘಟನಟ್ಟಿ, ಸಂಘಟನಾ ಚೇರ್ಮನ್ ಡಾ. ಸಂತೋಷ್ ಡಿ. ಹಜಾರೆ ಹಾಗೂ ಸಿಎಂಇ ಸಹ-ಚೇರ್ಮನ್ ಡಾ. ವಾಣಿಶ್ರೀ ಗಾನಕುಮಾರ್ ಅವರು ಕಾರ್ಯಕ್ರಮದ ಮುಂಚೂಣಿಯಲ್ಲಿದ್ದರು. ಇವರೊಂದಿಗೆ ಜಂಟಿ ಕಾರ್ಯದರ್ಶಿ ಡಾ. ಸ್ವಪ್ನಿಲ್ ಪಟ್ಟಣಶೆಟ್ಟಿ, ಜಂಟಿ ಖಜಾಂಚಿ ಡಾ. ಶಾಂತಾ ಎ.ಆರ್., ವೇದಿಕೆ ಮತ್ತು ಉದ್ಘಾಟನಾ ಸಮಿತಿಯ ಡಾ. ಸುದರ್ಶನ್ ಚೌಗಲೆ ಹಾಗೂ ಡಾ. ಸೂರಜ್ ದೇಸಾಯಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ನೋಂದಣಿ ವಿಭಾಗದಲ್ಲಿ ಡಾ. ಸಂದೇಶಾ ಘೋರ್ಪಡೆ, ಡಾ. ಗೀತಾ ದೇಸಾಯಿ, ಬಸವರಾಜ್ ಮಜಾತಿ ಕಾರ್ಯನಿರ್ವಹಿಸಿದರೆ, ವೈಜ್ಞಾನಿಕ ಸಮಿತಿಯಲ್ಲಿ ಡಾ. ತರುಣ್ ಶಿವಾ, ಡಾ. ಉಜ್ವಲ್ ನಿಶಾಂತ್, ಡಾ. ನಿತೇಶ್ ನಲಬಾಲೆ, ಡಾ. ಸ್ವಪ್ನಿಲ್ ಸಪ್ರೆ ಜವಾಬ್ದಾರಿ ಹೊತ್ತಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಸೌಮ್ಯಾ ಮಾಸ್ತೆ, ಡಾ. ಶ್ರೀದೇವಿ ಎಣ್ಣಿ, ಡಾ. ಆಯಿಷಾ ಪರಾಂಡೆ ಮತ್ತು ಡಾ. ರೂಪಾಲಿ ಶಿಂಧೆ ಅವರು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.

Tags:

error: Content is protected !!