airforce

ಬೆಳಗಾವಿ ಸಾಂಬ್ರಾದಲ್ಲಿ ವಾಯುಪಡೆ ‘ಸಾರಂಗ್’ ತಂಡದಿಂದ ರೋಮಾಂಚಕ ಏರ್ ಶೋ; ಹೆಲಿಕಾಪ್ಟರ್‌ಗಳ ಸಾಹಸಕ್ಕೆ ಜನ ಫಿದಾ

Share

ಬೆಳಗಾವಿಯ ಸಾಂಬ್ರಾ ವಾಯುಪಡೆ ತರಬೇತಿ ಶಾಲೆಯಲ್ಲಿ ಇಂದು ವಿಶ್ವವಿಖ್ಯಾತ ‘ಸಾರಂಗ್’ ಹೆಲಿಕಾಪ್ಟರ್ ಡಿಸ್ಪ್ಲೇ ತಂಡದಿಂದ ಆಯೋಜಿಸಲಾಗಿದ್ದ ವೈಮಾನಿಕ ಪ್ರದರ್ಶನ (ಏರ್ ಶೋ) ನೋಡುಗರ ಕಣ್ಣುಮನ ಸೆಳೆಯಿತು. ವಾಯುಪಡೆ ಅಗ್ನಿವೀರರ ೭ನೇ ತಂಡದ ನಿರ್ಗಮನ ಪಥ ಸಂಚಲನ ಮುಗಿಯುತ್ತಿದ್ದಂತೆ ಆಕಾಶದಲ್ಲಿ ನಡೆದ ಈ ರೋಮಾಂಚಕ ಕಸರತ್ತುಗಳು ನೆರೆದಿದ್ದವರಲ್ಲಿ ರೋಮಾಂಚನ ಉಂಟುಮಾಡಿದವು.

ವಿಶ್ವದಲ್ಲೇ ಏಕೈಕ ೫ ಹೆಲಿಕಾಪ್ಟರ್ ಡಿಸ್ಪ್ಲೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಸಾರಂಗ್’ ತಂಡವು, ಸ್ವದೇಶಿ ನಿರ್ಮಿತ ಎಎಲ್‌ಎಚ್ ಧ್ರುವ ಹೆಲಿಕಾಪ್ಟರ್‌ಗಳನ್ನು ಬಳಸಿ ಬೆಳಗಾವಿಯ ಆಕಾಶದಲ್ಲಿ ನಾನಾ ರೀತಿಯ ಸಾಹಸಮಯ ಕಸರತ್ತುಗಳನ್ನು ಪ್ರದರ್ಶಿಸಿತು. ಮುಗಿಲತ್ತ ಚಿಮ್ಮುತ್ತಾ, ವಿವಿಧ ವಿಭಿನ್ನ ಚಿತ್ತಾರಗಳನ್ನು ಮೂಡಿಸಿದ ಹೆಲಿಕಾಪ್ಟರ್‌ಗಳ ಹಾರಾಟ ಪ್ರೇಕ್ಷಕರನ್ನು ಬೆರಗುಗೊಳಿಸಿತು.

ಕಮಾಂಡಿಂಗ್ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಅಭಿಜೀತ್ ಕುಮಾರ್ ಏರ್ ಕಮಾಂಡರ್ ಸೂರಜ್ ಶಂಕರ್ ಅವರು ಉಪಸ್ಥಿತರಿದ್ದು, ತರಬೇತಿ ನಿರತರ ಸಾಧನೆ ಹಾಗೂ ಸಾರಂಗ್ ತಂಡದ ವೈಮಾನಿಕ ಪ್ರದರ್ಶನವನ್ನು ಶ್ಲಾಘಿಸಿದರು.

Tags:

error: Content is protected !!