ಅದು ಎಷ್ಯಾ ಖಂಡದಲ್ಲಿಯೇ ಹೆಚ್ಚು ಮುಳುಗಡೆ ಬಾಧಿತ ಜಿಲ್ಲೆ ಅಂತಾನೇ ಪ್ರಸಿದ್ದಿ ಪಡೆದಿದೆ.ನೂತನ ಸಿಎಂ ಡಿಕೆಶಿ ಅವ್ರ ಸಂಪುಟದಲ್ಲಿ ಸಂತ್ರಸ್ತರ ಜಿಲ್ಲೆಗೆ ಸಿಕ್ಕಿಲ್ಲ ಮಂತ್ರಿಗಿರಿ ಭಾಗ್ಯ.ಸಿಎಂ ಡಿಕೆಶಿ ನಡೆಗೆ ಮುಳುಗಡೆ ಜಿಲ್ಲೆ ಸಂತ್ರಸ್ತರಲ್ಲಿ ಆತಂಕ ಹೆಚ್ಚಿಸಿದೆ.ಡಿಕೆಶಿ ಸಂಪುಟದಲ್ಲಿ ಬಾಗಲಕೋಟೆ ಜಿಲ್ಲೆಗೆ ಒಲಿಯದ ಮಂತ್ರಿಭಾಗ್ಯದ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…


ಒಂದೆಡೆ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಡಿಕೆಶಿ.ಮತ್ತೊಂದೆಡೆ ನೂತನ ಸಿಎಂ ಸಂಪುಟ ಸೇರಿದ ಕೆಲ ಸಚಿವರಿಂದ ಪ್ರಮಾಣ ವಚನ.ಇನ್ನೊಂದೆಡೆ ಮುಳುಗಡೆ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗದಕ್ಕೆ ಆತಂಕ ವ್ಯಕ್ತ ಪಡಿಸಿರೋ ಮುಳುಗಡೆ ಸಂತ್ರಸ್ತರು.ಇಂತಹ ಬೆಳವಣಿಗೆಗೆ ಸಾಕ್ಷಿಯಾಗಿದ್ದು ಮುಳುಗಡೆ ಜಿಲ್ಲೆ ಬಾಗಲಕೋಟೆ.ಹೌದು ನೂತನ ಸಿಎಂ ಡಿಕೆಶಿ ಅವ್ರ ಸಂಪುಟದಲ್ಲಿ ಬಾಗಲಕೋಟೆ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ.ಜಿಲ್ಲೆಯ ಮುಳುಗಡೆ ಸಂತ್ರಸ್ತರ ಕೂಗಿಗೆ ಸ್ಪಂಧಿಸಲು ಸ್ಥಳೀಯವಾಗಿ ಒಬ್ಬರಿಗೆ ಸಚಿವಸ್ಥಾನ ಕೊಡಬೇಕಿತ್ತು.ಆದ್ರೆ ಸಿಎಂ ಡಿಕೆಶಿ ಅವ್ರ ಮೊದ್ಲ ಸಂಪುಟದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಕೈ ಬಿಟ್ಟಿದ್ದು ಜಿಲ್ಲೆಯ ಮುಳುಗಡೆ ಸಂತ್ರಸ್ತರು ಬೇಸರ ವ್ಯಕ್ತ ಪಡಿಸಿದ್ದಾರೆ….

ಇನ್ನು ನೂತನ ಸಿಎಂ ಡಿಕೆಶಿ ಅವ್ರ ಸಂಪುಟದಲ್ಲಿ ಬಾಗಲಕೋಟೆ ಜಿಲ್ಲೆಗೆ ಮೊದಲ ಲಿಸ್ಟ್ ನಲ್ಲಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಶಾಸಕ ತಿಮ್ಮಾಪೂರ, ಕಾಶಪ್ಪನವರ್ ಹಾಗೂ ಜೆ.ಟಿ.ಪಾಟೀಲ್ ಅವ್ರಿಗೆ ಶಾಕ್ ನೀಡಿದ್ದು,ಮೊದಲ ಲಿಸ್ಟ್ ಜಿಲ್ಲೆಯ ಶಾಸಕರಿಗೆ ನಿರಾಶೆ ಹೆಚ್ಚಿಸಿದೆ.ಸಚಿವ ಸ್ಥಾನ ಪಡೆಯಲು ಲಾಭಿ ನಡೆಸಿರೋ ಶಾಸಕ ಜೆ.ಟಿ.ಪಾಟೀಲ್, ಕಾಶಪ್ಪನವರ್ ಬೆಂಗಳೂರಿನಲ್ಲಿ ಟಿಕಾಣಿ ಹೂಡಿದ್ದಾರೆ.ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ತಿಮ್ಮಾಪುರಗೆ ಢವಢವ ಶುರುವಾಗಿದೆ.ಎರಡನೇ ಲಿಸ್ಟ್ ನಲ್ಲಾದ್ರೂ ಜಿಲ್ಲೆಯ ಶಾಸಕರು ಸಚಿವ ಸ್ಥಾನ ಪಡೆಯಲು ತೆರೆ ಮರೆ ಲಾಭಿ ನಡೆಸಿದ್ದಾರೆ…
ಒಟ್ಟಿನಲ್ಲಿ ನೀತನ ಸಿಎಂ ಡಿಕೆಶಿ ಅವ್ರ ಸಂಪುಟದಲ್ಲಿ ಬಾಗಲಕೋಟೆ ಜಿಲ್ಲೆಗೆ ಮಂತ್ರಿ ಸ್ಥಾನ ನೀಡದಿರೋದು ಸಂತ್ರಸ್ತರನ್ನ ನಿರ್ಲಕ್ಷಿಸಿ ದಂತಾಗಿದ್ದು,ಡಿಕೇಶಿ ನಡೆ ಯುಕೆಪಿ ವಿರೋಧಿ ನಡೆ ಎಂದೇ ಬಿಂಬಿತವಾಗ್ತಿದ್ದು, ಸಂಪುಟದಲ್ಲಿ ಸಂತ್ರಸ್ತರ ಧ್ವನಿ ಎತ್ತುವ ಉಸ್ತುವಾರಿ ಜವಾಬ್ದಾರಿಯನ್ನ ಜಿಲ್ಲೆಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಿ ಅವಕಾಶ ಕಲ್ಪಿಸಲಿ ಅನ್ನೋದು ಜನ್ರ ಮಾತು…
