ಬೆಳಗಾವಿ ತಾಲೂಕಿನ ಸುಳಗಾ ಉಚಗಾಂವನ ಸರ್ಕಾರಿ ಮರಾಠಿ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ರಾಜಶ್ರೀ ಅಗ್ರಿವೆಂಚರ್ ಹಾಗೂ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ವತಿಯಿಂದ ಒಟ್ಟು 230 ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು.

ಬೆಳಗಾವಿ ತಾಲೂಕಿನ ಸುಳಗಾ ಉಚಗಾಂವನ ಸರ್ಕಾರಿ ಮರಾಠಿ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ರಾಜಶ್ರೀ ಅಗ್ರಿವೆಂಚರ್ ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷದ ಸಹಯೋಗದೊಂದಿಗೆ ಶಾಲೆಯ ಒಟ್ಟು 230 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ರಾಜಶ್ರೀ ಅಗ್ರಿವೆಂಚರ್ ಸಂಸ್ಥೆಯ ವತಿಯಿಂದ ಸರಸ್ವತಿ ದೇವಿಯ ಭಾವಚಿತ್ರ ಪೂಜೆ ನೆರವೇರಿಸಲಾಯಿತು ಮತ್ತು ಸಂಸ್ಥೆಯ ಸಂಸ್ಥಾಪಕರು ಮಕ್ಕಳಿಗೆ ಉನ್ನತ ಶಿಕ್ಷಣದ ಕುರಿತು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಶಿವಸೇನೆಯ ಉಪಜಿಲ್ಲಾ ಪ್ರಮುಖ್ ಬಂಡು ಕೇರವಾಡ್ಕರ್, ಉಪನಗರ ಪ್ರಮುಖ್ ರಾಜು ತುಡಯೇಕರ್, ಪ್ರವೀಣ್ ತೇಜಂ, ಅಡ್ವೊಕೇಟ್ ಪ್ರಶಾಂತ್ ಪವಾರ್, ಪ್ರದೀಪ್ ಸುತಾರ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಓ. ಎನ್. ಮಾದಾರ್, ಎಂ. ಆರ್. ಕೋವಾಡ್ಕರ್, ಎಚ್. ಎನ್. ಪಾವಲೆ, ಶಾಲಾ ಶಿಕ್ಷಕ ವೃಂದ, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿ. ಎನ್. ಮುತಗೇಕರ್ ಕಾರ್ಯಕ್ರಮದ ನಿರೂಪಣೆ ಮಾಡಿದರು.

