BELAGAVI

ಬೆಳಗಾವಿಯ KLS GITಯಲ್ಲಿ ‘ಯೋಗಾಸನ ಸ್ಪರ್ಧೆ 2026’ ಯಶಸ್ವಿ: ಯೋಗ ಪಟುಗಳ ಮನಮೋಹಕ ಪ್ರದರ್ಶನ!

Share

ಬೆಳಗಾವಿಯ ಪ್ರತಿಷ್ಠಿತ ಕೆಎಲ್‌ಎಸ್ ಗೋಗ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ‘ಯೋಗಾಸನ ಸ್ಪರ್ಧೆ 2026’ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಬೆಳಗಾವಿಯ ಕೆಎಲ್‌ಎಸ್ ಜಿಐಟಿ ಕಾಲೇಜಿನ ಕ್ರೀಡೆ ಮತ್ತು ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಈ ಪ್ರಮುಖ ಯೋಗಾಸನ ಸ್ಪರ್ಧೆಯನ್ನು ಕೆಎಲ್‌ಎಸ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಾಜೇಂದ್ರ ಬೆಳಗಾಂವಕರ್ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಯೋಗವು ಕೇವಲ ದೈಹಿಕ ಕಸರತ್ತಲ್ಲ, ಅದು ಮನಸ್ಸನ್ನು ಪ್ರಶಾಂತವಾಗಿಡುವ ಮತ್ತು ಸಮತೋಲಿತ ಜೀವನ ನಡೆಸುವ ಅದ್ಭುತ ಕಲೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ವಿಜಯ್ ಅಠಾವಳೆ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಾರ್ಜ್ ರೊಡ್ರಿಗಸ್ ಉಪಸ್ಥಿತರಿದ್ದು, ಯುವ ಪೀಳಿಗೆಗೆ ಯೋಗದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.

ಈ ರೋಮಾಂಚಕ ಸ್ಪರ್ಧೆಯಲ್ಲಿ ಬೆಳಗಾವಿ, ಹುಬ್ಬಳ್ಳಿ, ಗೋಕಾಕ್, ದಾವಣಗೆರೆ ಮತ್ತು ಮುನ್ನೋಳಿ ಸೇರಿದಂತೆ ವಿವಿಧ ಭಾಗಗಳ ಸುಮಾರು 85ಕ್ಕೂ ಹೆಚ್ಚು ಯೋಗ ಪಟುಗಳು ಪಾಲ್ಗೊಂಡಿದ್ದರು. 8 ರಿಂದ 25 ವರ್ಷ ಮೇಲ್ಪಟ್ಟ ನಾಲ್ಕು ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಪ್ರದರ್ಶಿಸಿದ ಕಠಿಣ ಆಸನಗಳು ನೆರೆದಿದ್ದವರ ಗಮನ ಸೆಳೆದವು. ಅನುಭವಿ ಯೋಗ ತಜ್ಞರಾದ ಮುರಳಿಧರ್ ಪ್ರಭು, ರಶ್ಮಿ ಚೌಹಾಣ್ ಸೇರಿದಂತೆ ಐದು ಜನರ ತೀರ್ಪುಗಾರರ ಮಂಡಳಿಯು ಸ್ಪರ್ಧಿಗಳ ನಮ್ಯತೆ, ಸಮತೋಲನ ಮತ್ತು ನಿಖರತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ವಿಜೇತರನ್ನು ಆಯ್ಕೆ ಮಾಡಿತು. ಈ ಯೋಗ ಉತ್ಸವವು ಸಮಾಜದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಉತ್ತಮ ಪ್ರೇರಣೆ ನೀಡುವಲ್ಲಿ ಯಶಸ್ವಿಯಾಯಿತು.

Tags:

error: Content is protected !!