BELAGAVI

ಬೆಳಗಾವಿ: ಕ್ಯಾಂಟೋನ್ಮೆಂಟ್ ರಸ್ತೆಗೆ ಬಿದ್ದ ಆಲದ ಮರ; ಸಂಚಾರ ಮುಕ್ತಗೊಳಿಸಿದ ಸಾಜೀದ್ ಶೇಖ್

Share

ಬೆಳಗಾವಿಯ ಬೇವೂರು ರಸ್ತೆಯಲ್ಲಿ ತಡರಾತ್ರಿ ಬೃಹತ್ ಆಲದ ಮರದ ಕೊಂಬೆಯೊಂದು ಉರುಳಿ ಬಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕ್ಯಾಂಟೋನ್ಮೆಂಟ್ ಮಂಡಳಿಯ ಮಾಜಿ ಉಪಾಧ್ಯಕ್ಷ ಸಾಜೀದ್ ಶೇಖ್ ಅವರು, ಸಿಬ್ಬಂದಿಯೊಂದಿಗೆ ಸ್ವತಃ ಜೆಸಿಬಿ ಮೇಲೇರಿ ನಿಂತು ಮರವನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬೆಳಗಾವಿಯ ಬೇವೂರು ರಸ್ತೆಯಲ್ಲಿ ತಡರಾತ್ರಿ ಸುಮಾರು 2:00 ಗಂಟೆಯ ಸುಮಾರಿಗೆ ಬೃಹತ್ ಆಲದ ಮರದ ಕೊಂಬೆಯೊಂದು ಹಠಾತ್ತನೆ ಮುರಿದು ಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಮರ ಬಿದ್ದ ರಭಸಕ್ಕೆ ವಿದ್ಯುತ್ ತಂತಿಗಳು ಸಂಪೂರ್ಣವಾಗಿ ತುಂಡಾಗಿ ರಸ್ತೆಗೆ ಬಿದ್ದಿದ್ದವು. ವಿಷಯ ತಿಳಿದ ತಕ್ಷಣವೇ ಇಂದು ಬೆಳಿಗ್ಗೆ ಬೆಳಗಾವಿ ಕ್ಯಾಂಟೋನ್ಮೆಂಟ್ ಕಚೇರಿಯ ಅಧಿಕಾರಿಗಳು ನೆರವಿಗಾಗಿ ಮಾಜಿ ಉಪಾಧ್ಯಕ್ಷರಾದ ಸಾಜೀದ್ ಶೇಖ್ ಅವರಿಗೆ ಕರೆ ಮಾಡಿದರು. ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸಾಜಿದ್ ಭಾಯ್ ಅವರು, ತಾವೇ ಖುದ್ದಾಗಿ ಸ್ಥಳಕ್ಕೆ ಧಾವಿಸಿ, ಜೆಸಿಬಿ ಯಂತ್ರದ ಮೇಲೆ ನಿಂತುಕೊಂಡು ಕ್ಯಾಂಟೋನ್ಮೆಂಟ್ ಕರ್ಮಚಾರಿಗಳ (ಸಿಬ್ಬಂದಿ) ಸಹಾಯದೊಂದಿಗೆ ಮರದ ಕೊಂಬೆಗಳನ್ನು ಕತ್ತರಿಸಿ ರಸ್ತೆಯನ್ನು ಸಂಪೂರ್ಣವಾಗಿ ಕ್ಲಿಯರ್ ಮಾಡಿದ್ದಾರೆ. ಸದ್ಯ ಬೇವೂರು ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.

Tags:

error: Content is protected !!