ಖಾನಾಪುರ ತಾಲೂಕಿನ ಮರ್ತುಗಾ ಗ್ರಾಮದ ನಿವಾಸಿಯಾಗಿದ್ದು, ಖಾನಾಪುರ ಪೋಸ್ಟ್ ಆಫೀಸ್ನಲ್ಲಿ ಸುದೀರ್ಘ 40 ವರ್ಷಗಳ ಕಾಲ ಪೋಸ್ಟ್ಮನ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಳ್ಳುತ್ತಿರುವ ಸುರಪ್ಪ ಕೃಷ್ಣಾ ಪಾಟೀಲ್ ಅವರಿಗೆ ಖಾನಾಪುರ ಅರ್ಬನ್ ಬ್ಯಾಂಕ್ ಅಧ್ಯಕ್ಷರಾದ ಅಮೃತ್ ಶೇಲಾರ್ ಅವರು ಸತ್ಕರಿಸಿ ಗೌರವ ಹಾರdeviation ಸಮರ್ಪಿಸಿದ್ದಾರೆ. ಸುರಪ್ಪ ಅವರ ಸರಳತೆ ಹಾಗೂ ಕರ್ತವ್ಯ ನಿಷ್ಠೆಯನ್ನು ಕೊಂಡಾಡಿದ ಅಮೃತ್ ಶೇಲಾರ್, ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.


ಖಾನಾಪುರ ತಾಲೂಕಿನ ಮರ್ತುಗಾ ಗ್ರಾಮದ ನಿವಾಸಿ ಸುರಪ್ಪ ಕೃಷ್ಣಾ ಪಾಟೀಲ್ ಅವರು ಖಾನಾಪುರ ಪೋಸ್ಟ್ ಆಫೀಸ್ನಲ್ಲಿ ಸುಮಾರು 40 ವರ್ಷಗಳ ಕಾಲ ಪೋಸ್ಟ್ಮನ್ ಆಗಿ ಸುದೀರ್ಘ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿ ಇಂದು ನಿವೃತ್ತಿಗೊಂಡಿದ್ದಾರೆ. ಈ ಸಂದರ್ಭದಲ್ಲಿ ಖಾನಾಪುರ ಅರ್ಬನ್ ಬ್ಯಾಂಕ್ ಅಧ್ಯಕ್ಷರಾದ ಅಮೃತ್ ಶೇಲಾರ್ ಅವರು ಸುರಪ್ಪ ಕೃಷ್ಣಾ ಪಾಟೀಲ್ ಅವರನ್ನು ಆತ್ಮೀಯವಾಗಿ ಸತ್ಕರಿಸಿ, ಗೌರವಿಸಿ ಬೀಳ್ಕೊಟ್ಟರು. ಎಲ್ಲರೊಂದಿಗೆ ಅತ್ಯಂತ ಸೌಜನ್ಯ ಹಾಗೂ ಪ್ರೀತಿಯಿಂದ ವರ್ತಿಸಿ ಮನೆಮಾತಾಗಿದ್ದ ಸುರಪ್ಪ ಅವರ ನಿವೃತ್ತಿ ಜೀವನವು ಸುಖ-ಸಂತೋಷ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಅಮೃತ್ ಶೇಲಾರ್ ಅವರು ಇದೇ ವೇಳೆ ಹಾರೈಕೆ ಮಾಡಿದರು. ಈ ಸನ್ಮಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ವಾಸುದೇವ್ ಚೌಗಲೆ ಸೇರಿದಂತೆ ಇನ್ನಿತರ ಪ್ರಮುಖ ಗಣ್ಯಮಾನ್ಯರು ಹಾಗೂ ಪೋಸ್ಟ್ ಆಫೀಸ್ನ ಪ್ರಮುಖ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

