Khanapur

ಬೆಳಗಾವಿ ಪೊಲೀಸರ ಬಿಗ್ ಆಪರೇಷನ್

Share

ಖಾನಾಪುರ ತಾಲೂಕಿನ ಕಾಟಗಾಳಿ ಗ್ರಾಮದಲ್ಲಿ ಅಕ್ರಮವಾಗಿ ಕಂಟ್ರಿ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಖಾನಾಪುರ ಪೊಲೀಸರು ಭೇದಿಸಿ 13 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.

ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾರುತಿ ಶ್ರೀಕಾಂತ್ ಸುತಾರ ಎಂಬಾತನು 2024ರಿಂದ ತನ್ನ ಮನೆಯಲ್ಲಿ ಕಂಟ್ರಿ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ. ಮೇ 11ರಂದು ಆತನನ್ನು ಬಂಧಿಸಿ, ತಯಾರಿಕಾ ಹಂತದಲ್ಲಿದ್ದ ಒಂದು ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಆತನಿಂದ ಬಂದೂಕು ಖರೀದಿಸಿದ್ದ ಎಂಟು ಮಂದಿಯನ್ನು ಬಂಧಿಸಿ, ಅವರಿಂದ 8 ಕಂಟ್ರಿ ಬಂದೂಕುಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ಇದೇ ಪ್ರಕರಣದಲ್ಲಿ ಬಂದೂಕು ತಯಾರಿಕೆಗೆ ಹಣಕಾಸು ನೆರವು ನೀಡಿದ್ದ ಒಬ್ಬನನ್ನು, ಬಿಡಿಭಾಗಗಳು ಹಾಗೂ ಮದ್ದುಗುಂಡುಗಳನ್ನು ಪೂರೈಸುತ್ತಿದ್ದ ಇಬ್ಬರನ್ನು ಹಾಗೂ ಬಂದೂಕಿನ ಬ್ಯಾರಲ್‌ಗಳಿಗೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಒಬ್ಬನನ್ನು ಬಂಧಿಸಲಾಗಿದೆ ಎಂದರು.
ಆರೋಪಿಗಳಿಂದ ಟ್ರಿಗರ್‌ಗಳು, ಗನ್ ಬಿಡಿಭಾಗಗಳು, ಮದ್ದುಗುಂಡುಗಳು, ಸೀಸಿನ ಗೋಲಿಗಳು, ಜೀವಂತ ಕಾಡತೂಸುಗಳು ಸೇರಿದಂತೆ ಅಪಾರ ಪ್ರಮಾಣದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

Tags:

error: Content is protected !!