BELAGAVI

ಖಾನಾಪುರ: ನಂದಗಡ PSI ಬಾದಾಮಿ ನಿವೃತ್ತಿ; ದೀಪಾ ಪಾಟೀಲ್ ಅವರಿಂದ ಸತ್ಕಾರ

Share

ನಂದಗಡ ಪೊಲೀಸ್ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಾ, ಜನಸ್ನೇಹಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಪಿಎಸ್ಐ ಬಾದಾಮಿ ಅವರಿಗೆ ಖಾನಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾ ಗ್ರಾಮೀಣ ಘಟಕದ ಅಧ್ಯಕ್ಷೆ ದೀಪಾ ಪಾಟೀಲ್ ಅವರು ಸತ್ಕರಿಸಿ, ಗೌರವ ಸಲ್ಲಿಸಿದ್ದಾರೆ.

ಸುಮಾರು 101 ಹಳ್ಳಿಗಳ ಬೃಹತ್ ವ್ಯಾಪ್ತಿಯನ್ನು ಹೊಂದಿರುವ ನಂದಗಡ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಪಿಎಸ್ಐ ಬಾದಾಮಿ ಅವರು ತಮ್ಮ ಸುದೀರ್ಘ ಸೇವಾ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನಿವೃತ್ತಿ ಹೊಂದುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಂದಗಡ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬ್ಲಾಕ್ ಕಾಂಗ್ರೆಸ್ ಮಹಿಳಾ ಗ್ರಾಮೀಣ ಘಟಕದ ಅಧ್ಯಕ್ಷೆ ದೀಪಾ ಪಾಟೀಲ್ ಬೆಳ್ಕೋಟರು, ಪಿಎಸ್ಐ ಬಾದಾಮಿ ಅವರನ್ನು ಶಾಲು ಹೊದಿಸಿ ಸತ್ಕರಿಸಿದರು.

ಬಳಿಕ ಮಾತನಾಡಿದ ದೀಪಾ ಪಾಟೀಲ್ ಅವರು, “ಠಾಣೆಗೆ ನೊಂದು ಬಂದ ಜನರಿಗೆ ಸೌಜನ್ಯದಿಂದ ಸ್ಪಂದಿಸಿ, ನ್ಯಾಯ-ಅನ್ಯಾಯಗಳ ಪಾಠ ಹೇಳಿಕೊಟ್ಟು ಬುದ್ಧಿಮಾತು ಹೇಳುತ್ತಿದ್ದ ಬಾದಾಮಿ ಅವರು ನಿಜಕ್ಕೂ ಒಬ್ಬ ದಕ್ಷ ಅಧಿಕಾರಿಯಾಗಿದ್ದಾರೆ. ಅವರ ಮುಂದಿನ ನಿವೃತ್ತ ಜೀವನವು ಸುಖ-ಸಂತೋಷದಿಂದ ಕೂಡಿರಲಿ” ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪ್ರೊಬೇಷನರಿ ಪಿಎಸ್ಐಗಳು ಹಾಗೂ ಠಾಣೆಯ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags:

error: Content is protected !!