BELAGAVI

ಬೆಳಗಾವಿಯ ಕಂಗ್ರಾಳಿ ಖುರ್ದ್ ಶಾಲೆಯ ಶತಮಾನೋತ್ಸವ ಮಹೋತ್ಸವ ವೈಭವದ ಭವ್ಯ ಶೋಭಾಯಾತ್ರಯಲ್ಲಿ ಪಾಲ್ಗೊಂಡ ಗಣ್ಯರು ಹಾಗೂ ಹಳೇ ವಿದ್ಯಾರ್ಥಿಗಳು

Share

ಬೆಳಗಾವಿ ತಾಲೂಕಿನ ಕಂಗ್ರಾಳಿ ಖುರ್ದ್ ಗ್ರಾಮದಲ್ಲಿ ನೂರು ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಶತಮಾನೋತ್ಸವ ಮಹೋತ್ಸವಕ್ಕೆ ಶನಿವಾರ ಅತ್ಯಂತ ವೈಭವದ ಚಾಲನೆ ದೊರೆತಿದೆ. ಹಳೆಯ ವಿದ್ಯಾರ್ಥಿಗಳ ಮುತುವರ್ಜಿಯಲ್ಲಿ ಆಯೋಜಿಸಲಾದ ಈ ಎರಡು ದಿನಗಳ ಐತಿಹಾಸಿಕ ಕಾರ್ಯಕ್ರಮದಲ್ಲಿ ಭವ್ಯ ಗ್ರಂಥದಿಂಡಿ ಹಾಗೂ ಮರಾಠಿ ಸಂಸ್ಕೃತಿ ಬಿಂಬಿಸುವ ಶೋಭಾಯಾತ್ರೆ ಎಲ್ಲರ ಗಮನ ಸೆಳೆಯಿತು.

ಬೆಳಗಾವಿ ತಾಲೂಕು ಮತ್ತು ಜಿಲ್ಲೆಯ ಕಂಗ್ರಾಳಿ ಖುರ್ದ್ ಗ್ರಾಮದ, ನೂರು ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಶತಮಾನೋತ್ಸವ ಮಹೋತ್ಸವಕ್ಕೆ ಶನಿವಾರ ಭವ್ಯ ಗ್ರಂಥದಿಂಡಿ ಹಾಗೂ ಶೋಭಾಯಾತ್ರೆಯೊಂದಿಗೆ ವೈಭವದ ಚಾಲನೆ ದೊರೆಯಿತು. ಶಾಲೆಯ ಹಳೆಯ ವಿದ್ಯಾರ್ಥಿಗಳ ಮುತುವರ್ಜಿಯಿಂದ ಆಯೋಜಿಸಲಾದ ಈ ಎರಡು ದಿನಗಳ ಮಹೋತ್ಸವದಲ್ಲಿ ಪ್ರಸ್ತುತ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹಲವು ವರ್ಷಗಳ ನಂತರ ಒಂದೆಡೆ ಸೇರಿದ ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಆನಂದ ಮತ್ತು ಸಂಭ್ರಮ ಈ ಸಂದರ್ಭದಲ್ಲಿ ವಿಶೇಷವಾಗಿ ಗಮನ ಸೆಳೆಯಿತು.

ಬೆಳಗ್ಗೆ 10.30 ಕ್ಕೆ ಶಾಲಾ ಮೈದಾನದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಟಿ. ಡಿ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ, ಸಮಾಜ ಸೇವಕ ರಮಾಕಾಂತ್ ಕೊಂಡುಸ್ಕರ್, ಉದ್ಯಮಿ ಸಿ. ಎಂ. ಪಾಟೀಲ್, ಆರ್. ಐ. ಪಾಟೀಲ್, ಸಂಜಯ್ ಮೋಹನಗೇಕರ್, ಅಡ್ವೊಕೇಟ್ ಎಂ. ಜಿ. ಪಾಟೀಲ್, ಆರ್. ಎಂ. ಚೌಗುಲೆ, ವಿಕ್ರಮ್ ಮುತ್ಗೇಕರ್, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಪಾಟೀಲ್, ಉಪಾಧ್ಯಕ್ಷೆ ಅಶ್ವಿನಿ ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ದೀಪ ಪ್ರಜ್ವಲನೆ ಹಾಗೂ ಮಹಾಪುರುಷರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಮಹೋತ್ಸವವನ್ನು ಉದ್ಘಾಟಿಸಲಾಯಿತು.

ಉದ್ಘಾಟನಾ ಭಾಷಣದಲ್ಲಿ ರಮಾಕಾಂತ್ ಕೊಂಡುಸ್ಕರ್ ಅವರು ಶಿಕ್ಷಣದ ಮಹತ್ವವನ್ನು ಒತ್ತಿ ಹೇಳುತ್ತಾ, “ಈ ಶಾಲೆ ನಮ್ಮ ಎರಡನೇ ತಾಯಿ ಇದ್ದಂತೆ. ಪೋಷಕರು ಮತ್ತು ಗ್ರಾಮದ ನಂತರ, ಈ ಶಾಲೆಯಿಂದಾಗಿಯೇ ನಮ್ಮ ಗುರುತು ಜಗತ್ತಿನಾದ್ಯಂತ ನಿರ್ಮಾಣವಾಗಿದೆ,” ಎಂದು ಶಾಲೆಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಇನ್ನು ಆರ್. ಎಂ. ಚೌಗುಲೆ ಅವರು ಶಾಲೆಯ ಗ್ರಂಥಾಲಯ, ಪ್ರಯೋಗಾಲಯ ಮತ್ತು ಇತರ ಸೌಲಭ್ಯಗಳನ್ನು ಶ್ಲಾಘಿಸುತ್ತಾ, ಈ ಶಾಲೆಯು ದೇಶ-ವಿದೇಶಗಳಲ್ಲಿ ಅನೇಕ ವಿದ್ಯಾರ್ಥಿಗಳನ್ನು ಯಶಸ್ವಿ ವ್ಯಕ್ತಿಗಳನ್ನಾಗಿ ರೂಪಿಸಿದೆ ಎಂದು ಉಲ್ಲೇಖಿಸಿದರು. ಬೈಟ್
ಉದ್ಘಾಟನೆಯ ನಂತರ, ಸಾತಾರಾದ ಹ್ಯಾಪಿ ಮೆಡಿಕೇರ್ ಇಂಡಿಯಾದ ಅಧ್ಯಕ್ಷ ಧನಂಜಯ್ ಪಾಟೀಲ್ ಅವರು ‘ವಿದ್ಯಾರ್ಥಿಗಳು ಮತ್ತು ಪೋಷಕರ ಆರೋಗ್ಯ ಹಾಗೂ ಸರ್ವಾಂಗೀಣ ಅಭಿವೃದ್ಧಿ’ ಎಂಬ ವಿಷಯದ ಕುರಿತು ಮಾರ್ಗದರ್ಶನ ನೀಡಿದರು.

 

ಮಧ್ಯಾಹ್ನದ ಅವಧಿಯಲ್ಲಿ ‘ನನ್ನ ಯಶಸ್ಸಿನಲ್ಲಿ ಶಾಲೆಯ ಪಾತ್ರ’ ಎಂಬ ವಿಷಯದ ಕುರಿತು ಹಳೆಯ ವಿದ್ಯಾರ್ಥಿಗಳ ಅನುಭವ ಕಥನ ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮೊದಲ ದಿನದ ಸಮಾರಂಭ ಮುಕ್ತಾಯಗೊಳ್ಳಲಿದೆ.

Tags:

error: Content is protected !!