ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಿದ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಕ್ಕೆ ಒಪ್ಪಿ ರಾಜೀನಾಮೆ ನೀಡಿದ್ದಾರೆ. ಇನ್ನೇನೂ ಎರಡು ಮೂರು ದಿನಗಳಲ್ಲಿ ಹೊಸ ಸಿಎಂ ಅಧಿಕಾರ ಸ್ವೀಕರಿಸಲಿದ್ದಾರೆ. ಡಿಸಿಎಂ ಡಿ ಕೆ ಶಿವಕುಮಾರ ನೂತನ ಸಿಎಂ ಆಗೋದು ಪಕ್ಕಾ ಆದಂತಾಗಿದೆ. ಈ ನಡುವೆ ಈ ಬಾರಿ 4 ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ ಎಂಬ ಸದ್ದು ಜೋರಾಗಿದೆ. ಇತ್ತ ವಿಜಯಪುರ ಜಿಲ್ಲೆಯ ಆಧುನಿಕ ಭಗೀರಥ ಖ್ಯಾತಿಯ ಎಂ.ಬಿ.ಪಾಟೀಲರಿಗೂ ಡಿಸಿಎಂ ಪಟ್ಟ ಒಲಿಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನು ವಿಜಯಪುರ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಸ್ವಾಗತಿಸ ಲಾಗುತ್ತಿದೆ. ಈ ಕುರಿತು ಇಲ್ಲಿದೆ ಒಂದು ವರದಿ….

ಸದ್ಯ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಹೊಸ ಸರ್ಕಾರದಲ್ಲಿ 3ರಿಂದ 4 ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ವಿವಿಧ ಸಮುದಾಯಗಳಿಗೆ ರಾಜಕೀಯ ಪ್ರತಿನಿಧಿತ್ವ ನೀಡುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಹೆಜ್ಜೆ ಇಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.ವಉಪಮುಖ್ಯಮಂತ್ರಿ ಸ್ಥಾನಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಸಚಿವ ಎಂಬಿ.ಪಾಟೀಲ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಶಾಸಕರಾಗಿರುವ ಎಂ.ಬಿ.ಪಾಟೀಲ ಇವರು ಕೈಗಾರಿಕಾ ಸಚಿವರೂ ಕೂಡಾ ಆಗಿದ್ದಾರೆ. ಎಂಬಿ ಪಾಟೀಲ್ ಅವರ ಹೆಸರು ವೀರಶೈವ-ಲಿಂಗಾಯತ ಸಮುದಾಯದ ಪ್ರತಿನಿಧಿಯಾಗಿ ಪರಿಗಣನೆಯಲ್ಲಿದೆ. ಉತ್ತರ ಕರ್ನಾಟಕದಲ್ಲಿ ಪ್ರಭಾವ ಹೊಂದಿರುವ ನಾಯಕನಾಗಿ ಅವರನ್ನು ಪಕ್ಷ ಪ್ರಮುಖ ಸ್ಥಾನಕ್ಕೆ ತರುವ ಸಾಧ್ಯತೆ ಇದೆ. ಇನ್ನೂ ಆಧುನಿಕ ಭಗೀರಥ ಖ್ಯಾತಿಯ ಎಂ.ಬಿ.ಪಾಟೀಲರಿಗೆ ಡಿಸಿಎಂ ಪಟ್ಟ ಒಲಿದರೆ ಒಳ್ಳೆಯದು ಎನ್ನೋ ಮೂಲಕ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಂತೋಷ ಪಡುವದಾಗಿ ಹೇಳಿದ್ದಾರೆ.

ಇನ್ನೂ ಸಚಿವ ಎಂ ಬಿ ಪಾಟೀಲ್ ಗೆ ಡಿಸಿಎಂ ಕೊಟ್ಟರೆ ಸಂತೋಷ ಪಡುತ್ತೇವೆ ಸಿಎಂ ಆದರೂ ಖುಷಿ ಪಡುತ್ತೇವೆ ಎಂದು ಯತ್ನಾಳ ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ. ನಮ್ಮ ಜಿಲ್ಲೆಯವರೇ ಆದರೆ ಕೆಲಸಗಳು ಆಗುತ್ತವೆ ಹೊಟ್ಟೆ ಕಿಚ್ಚಿಲ್ಲಾ ಎನ್ನೋ ಮೂಲಕ
ನಮ್ಮ ಜಿಲ್ಲೆಯವರು ಡಿಸಿಎಂ ಆದರೆ ಸ್ವಾಗತ ಮಾಡುವೆ ಎಂದಿದ್ದಾರೆ. ಅಲ್ಲದೇ ಒಳ್ಳೆಯ ಭವಿಷ್ಯವಿದ್ದರೆ ಎಂ ಬಿ ಪಾಟೀಲ್ ಸಿಎಂ ಆಗಲಿ ನಾನು ಹೊಟ್ಟೆ ಕಚ್ಚು ಪಡುವ ವ್ಯಕ್ತಿಯಲ್ಲಾ ಎಂಬ ಹೇಳಿಕೆ ನೀಡೊ ಮೂಲಕ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.
ಒಟ್ಟಾರೆ ವಿಜಯಪುರ ಜಿಲ್ಲೆಗೆ ಡಿಸಿಎಂ ಪಟ್ಟ ದೊರೆತರೆ ಅದರಲ್ಲೂ ಎಂ.ಬಿ.ಪಾಟೀಲರಿಗೆ ದೊರೆತರೆ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಪೂರಕವಾಗಲಿದ್ದು ಅಭಿವೃದ್ದಿ ಪರ್ವ ಶುರುವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
