Raibag

ರಾಯಬಾಗದಲ್ಲಿ ಅಂತ್ಯಕ್ರಿಯೆ ವೇಳೆ ಭೀಕರ ಗಲಾಟೆ: ಮೃತರ ಕುಟುಂಬಸ್ಥರ ಮೇಲೆಯೇ ಅಳಿಯ ಹಾಗೂ ಸಹಚರರಿಂದ ಮಾರಣಾಂತಿಕ ಹಲ್ಲೆ!

Share

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಅಂತ್ಯಕ್ರಿಯೆ ವೇಳೆ ನಡೆದ ಗಲಾಟೆ ರಕ್ತರಂಜಿತ ತಿರುವು ಪಡೆದಿದೆ. ಮೃತ ವ್ಯಕ್ತಿಯ ಕುಟುಂಬಸ್ಥರ ಮೇಲೆಯೇ ಅಳಿಯ ಹಾಗೂ ಆತನ ಸಹಚರರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಸಂತೋಷ ಭೋಸಲೇ ಎಂಬ ವ್ಯಕ್ತಿ ನಿಧನರಾಗಿದ್ದು, ಕುಟುಂಬಸ್ಥರು ಅಂತ್ಯಕ್ರಿಯೆ ಕಾರ್ಯದಲ್ಲಿ ತೊಡಗಿದ್ದರು. ಕುಟುಂಬದ ಅಳಿಯನಾದ ಬೆಳಗಾವಿಯ ಅಭಿಷೇಕ್ ರವಿ ಮಾನೆ, ನಂದು ರವಿ ಮಾನೆ, ಇಂಚಲಕರಂಜಿಯ ಆಕಾಶ್ ಮಾನೆ, ಓಂಕಾರ್ ಭಿಷೇ ಸೇರಿದಂತೆ ಕೆಲ ಮಹಿಳೆಯರು ಹಾಗೂ ಸಹಚರರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗಲಾಟೆ ತಾರಕಕ್ಕೇರುತ್ತಿದ್ದಂತೆ ಆರೋಪಿಗಳು ಕಟ್ಟಿಗೆಗಳಿಂದ ಹಲ್ಲೆ ನಡೆಸಿದ್ದು, ಕೆಲವರ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.

ಹಲ್ಲೆಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಂತ್ಯಕ್ರಿಯೆ ಸಂದರ್ಭದಲ್ಲೇ ನಡೆದ ಈ ಮಾರಣಾಂತಿಕ ಹಲ್ಲೆ ರಾಯಬಾಗ ಪಟ್ಟಣದಲ್ಲಿ ಸಂಚಲನ ಮೂಡಿಸಿದ್ದು, ಆರೋಪಿಗಳ ಬಂಧನಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Tags:

error: Content is protected !!