BELAGAVI

ಬೆಳಗಾವಿ: ೨ ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ; ಶಾಸಕ ಅಭಯ್ ಪಾಟೀಲ್ ಖಡಕ್ ಎಚ್ಚರಿಕೆ

Share

ಆಂಕರ್: ಕಳೆದ 15 ದಿನಗಳಿಂದ ಬೆಳಗಾವಿ ನಗರದ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಭೀಕರ ಸ್ವರೂಪ ಪಡೆದುಕೊಂಡಿದೆ. ಒಂದು ವೇಳೆ 2 ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ತಕ್ಷಣವೇ ಪರಿಹರಿಸದಿದ್ದರೆ, ಆಕ್ರೋಶಗೊಂಡಿರುವ ಸಾರ್ವಜನಿಕರು ಮುಂದೆ ಏನು ಮಾಡುತ್ತಾರೋ ಎಂದು ಹೇಳಲು ಬರುವುದಿಲ್ಲ ಎಂಬುದನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ಬೆಳಗಾವಿ ನಗರದ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿದೆ. ಈ ಹಿನ್ನೆಲೆ ಇಂದು ಶಾಸಕ ಅಭಯ್ ಪಾಟೀಲ್ ಅವರ ನೇತೃತ್ವದಲ್ಲಿ ಎಲ್. ಆಂಡ್ ಟಿ, ಮಹಾನಗರ ಪಾಲಿಕೆ, ಜಲಮಂಡಳಿ, ಕೆ ಯು ಐ ಡಿ ಎಫ್;ಸಿಯ ಸಭೆಯನ್ನು ನಗರಸೇವಕರು ನಡೆಸಿದ್ದಾರೆ.

ಕಳೆದ 15 ದಿನಗಳಿಂದ ಬೆಳಗಾವಿಯ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಭೀಕರವಾಗಿದೆ. ಎಲ್. ಆಂಡ್ ಟಿ, ಮಹಾನಗರ ಪಾಲಿಕೆ, ಜಲಮಂಡಳಿ, ಕೆ ಯು ಐ ಡಿ ಎಫ್;ಸಿಯ ಸಭೆಯನ್ನು ನಗರಸೇವಕರು ನಡೆಸಿದ್ದಾರೆ. ಮಹಾಪೌರ-ಉಪಮಹಾಪೌರರು ಕೂಡ ಈ ಹಿಂದೆ ಸಭೆ ನಡೆಸಿದ್ದರು. ಇಂದಿನ ಸಭೆಯಲ್ಲಿ ಸಮಸ್ಯೆಯನ್ನು ಪರಿಹರಿಸದಿದ್ದರೇ, ಜನರು ಏನು ಮಾಡುತ್ತಾರೋ ಹೇಳಲು ಬರುವುದಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪೈಪಲೈನ್ ದುರಸ್ಥಿ, ಬೋರವೇಲ್ ದುರಸ್ಥಿ ಸೇರಿದಂತೆ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಲಾಗಿದೆ. 2 ದಿನಗಳಲ್ಲಿ ಸಮಸ್ಯೆ ಪರಿಹರಿಸಲಿಲ್ಲವೆಂದರೇ ಪರಿಣಾಮ ಗಂಭೀರವಾಗುತ್ತದೆ. ಇಲ್ಲದಿದ್ದರೇ, ಮುಂದಿನ ದಿನಗಳಲ್ಲಿ ಆ ಭಾಗದ ನಗರಸೇವಕರು ವಾರ್ಡಿನ ಜನರೊಂದಿಗೆ ಪ್ರತಿಭಟಿಸಲಿದ್ದಾರೆಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಎಚ್ಚರಿಕೆಯನ್ನು ನೀಡಿದರು. ಬೈಟ್

ಈ ಸಂದರ್ಭದಲ್ಲಿ ನಗರಸೇವಕರು, ಅಧಿಕಾರಿಗಳು ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!