politician

ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೇ. ನಿಭಾಯಿಸಲು ಸಿದ್ಧ…

Share

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮರುಹಂಚಿಕೆ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ ಬಿಡುವು ಹಂಚಿಕೊಂಡಿದ್ದಾರೆ. ಪಕ್ಷ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೇ ನಿಭಾಯಿಸಲು ಸಿದ್ಧ ಎಂದಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿದರು. ಸಿಎಂ ಬದಲಾವಣೆಯ ಕುರಿತು ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ. ನಾಳೆಯ ಔತಣಕೂಟದಲ್ಲಿ ತಿಳಿಸಬಹುದು. ಸಿಎಂ ಏನು ಹೇಳ್ತಾರೆ. ಹೈಕಮಾಂಡ್ ಯಾವ ಸಂದೇಶ ಕೊಟ್ಟಿದೆ ಗೊತ್ತಿಲ್ಲ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಚರ್ಚೆಯಿದೆ. ಏನೇ ವಿಚಾರವಿದ್ದರೂ ನಾಳೆ ಔತಣಕೂಟದಲ್ಲಿ ಚರ್ಚೆಯಾಗುತ್ತದೆ. ಪಕ್ಷ ಯಾವ ಸ್ಥಾನಮಾನ ಕೊಡುತ್ತದೆ ಅದನ್ನು ಒಪ್ಪಲೇಬೇಕು. ನಮ್ಮನ್ನು ಇನ್ನು ಆಹ್ವಾನಿಸಿಲ್ಲ. ನಮ್ಮನ್ನ ಕರೆದರೇ, ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ. ಅಧ್ಯಕ್ಷ ಸ್ಥಾನ ನೀಡಿ ಸಚಿವ ಸ್ಥಾನ ಬಿಟ್ಟು ಕೊಡಬೇಕು ಎಂಬ ಬಗ್ಗೆ ಚರ್ಚೆಯಾಗಿಲ್ಲ. ಪಕ್ಷದ ಅಂತಿಮ ನಿರ್ಧಾರ ನಮಗೆ ಗೊತ್ತಿಲ್ಲ ಎಂದರು. ಬೈಟ್

ತಾವೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಕೊಟ್ಟರೇ ನಿಭಾಯಿಸುತ್ತೇವೆ ಎಂದು ಈ ಹಿಂದೆಯೇ ಹೇಳಿದ್ದೇವೆ. ಇನ್ನು ಯಾವುದೇ ರೀತಿಯ ಚರ್ಚೆಯಾಗಿಲ್ಲ. ಸದ್ಯದ ಬೆಳವಣಿಗೆಯ ಬಳಿಕ ನೋಡೋಣ. ಆದರೂ ಅದರ ಬಗ್ಗೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ.

ಪಕ್ಷ ತಮಗೆ ಡಿಸಿಎಂ ಸ್ಥಾನ ನೀಡಿದರೇ ಒಪ್ಪುತ್ತೀರಾ ? ಎಂಬ ಪ್ರಶ್ನೆಗೆ ಪಕ್ಷ ಕೈಗೊಂಡ ನಿರ್ಣಯಕ್ಕೆ ಒಪ್ಪಲೇಬೇಕಾಗುತ್ತದೆ ಎಂದರು. ಎಲ್ಲ ಅಸಮಾಧಾನ ಮತ್ತು ಗೊಂದಲಗಳು ನಾಳೆಯ ಔತಣಕೂಟದಲ್ಲಿ ಬಗೆಹರಿಯಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಬೈಟ್

Tags:

error: Content is protected !!