State

ಮುಖ್ಯಮಂತ್ರಿಗಳ ದೆಹಲಿ ಭೇಟಿ ಮುಹೂರ್ತ ಫಿಕ್ಸ್

Share

ರಾಜ್ಯದಲ್ಲಿ ನಡೆಯುತ್ತಿರುವ ಪವರ್ ಪಾಲಿಟಿಕ್ಸ್ ಗೊಂದಲಕ್ಕೆ ಇನ್ಮುಂದೆ ತೆರೆ ಬೀಳಲೇಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಖಡಕ್ ಆಗಿ ಹೇಳಿದ್ದಾರೆ. ಸಿಎಂ ದೆಹಲಿ ಪ್ರವಾಸದ ಬೆನ್ನಲ್ಲೇ ಸಚಿವರು ನೀಡಿರುವ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಪವರ್ ಪಾಲಿಟಿಕ್ಸ್ ಗೊಂದಲ ಬಗೆಹರಿಸಲೇಬೇಕು. ಸಿಎಂ ಅವರಿಗೆ ದೆಹಲಿ ಭೇಟಿ ಮೂಹೂರ್ತ ಫಿಕ್ಸ್ ಆಗಿದೆ. ಆದರೇ ನಾಳೆ ಏನು ಚರ್ಚೆ ಆಗುತ್ತೆ ಎಂದು ಕಾಯ್ದು ನೋಡಬೇಕಿದೆ. ನಾನು ಮಾತ್ರ ದೆಹಲಿಗೆ ಹೋಗುತ್ತಿಲ್ಲ ಎಂದಿದ್ದಾರೆ.

Tags:

error: Content is protected !!