ಬೆಳಗಾವಿಯ ಗಣಪತ್ ಗಲ್ಲಿಯಲ್ಲಿರುವ ಐತಿಹಾಸಿಕ ಸರ್ಕಾರಿ ಶಾಲೆಗೆ ಅಪಚಾರವೆಸಗಿದ್ದ ಫಲಕವನ್ನು ಯುವಕರು ತೆರವುಗೊಳಿಸಿದ್ದಾರೆ. ಶಾಲೆಯ ನಾಮಫಲಕದ ಮೇಲೆಯೇ ಹಾಕಲಾಗಿದ್ದ ಸಾರ್ವಜನಿಕ ಪೇ ಟಾಯ್ಲೆಟ್ ಬೋರ್ಡ್ ತೆಗೆದುಹಾಕಿ, ಕನ್ನಡ ಮತ್ತು ಮರಾಠಿ ಭಾಷೆಯ ಶಾಲಾ ಫಲಕವನ್ನು ಮರುಅಳವಡಿಸುವ ಮೂಲಕ ಯುವಕರು ಗಮನ ಸೆಳೆದಿದ್ದಾರೆ.

ಬೆಳಗಾವಿಯ ಗಣಪತ್ ಗಲ್ಲಿಯಲ್ಲಿರುವ ನಗರದ ಅತ್ಯಂತ ಹಳೆಯ ಸರ್ಕಾರಿ ಮರಾಠಿ ಮಾದರಿ ಶಾಲೆ ನಂಬರ್ 2 ರ ನಾಮಫಲಕದ ಮೇಲೆ ಸಾರ್ವಜನಿಕ ಪೇ ಟಾಯ್ಲೆಟ್ ಫಲಕವನ್ನು ಅಳವಡಿಸಲಾಗಿತ್ತು. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಗಣಾಚಾರಿ ಗಲ್ಲಿಯ ಯುವಕರು, ವಿಜಯ್ ಪಾಟೀಲ್ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿ ತಕ್ಷಣವೇ ಆ ಪೇ ಟಾಯ್ಲೆಟ್ ಫಲಕವನ್ನು ತೆರವುಗೊಳಿಸಿದರು. ಬಳಿಕ ಅದೇ ಸ್ಥಾನದಲ್ಲಿ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಸ್ಪಷ್ಟವಾಗಿ ಬರೆಯಲಾದ ಶಾಲೆಯ ನೂತನ ನಾಮಫಲಕವನ್ನು ಅಳವಡಿಸಿ ಗೌರವ ಸಲ್ಲಿಸಿದರು. ಈ ಇಡೀ ಘಟನೆ ಹಾಗೂ ಇದರ ಹಿನ್ನೆಲೆಯ ಕುರಿತು ಸ್ಥಳೀಯ ನಗರಸೇವಕ ಶಂಕರ್ ಪಾಟೀಲ್ ಅವರು ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.

