Belagavi

ಬೆಳಗಾವಿ ಕೆಎಲ್‌ಎಸ್ ಐಎಂಇಆರ್ ಸಂಸ್ಥೆಯ ಮಹತ್ಕಾರ್ಯ 32 ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು 3.20 ಲಕ್ಷ ರೂ. ಮೌಲ್ಯದ ವಿದ್ಯಾರ್ಥಿವೇತನ ವಿತರಣೆ

Share

• ಕೆಎಲ್‌ಎಸ್ ಐಎಂಇಆರ್ ಸಂಸ್ಥೆಯಿಂದ ವಿದ್ಯಾರ್ಥಿವೇತನ ವಿತರಣೆ
• 32 ವಿದ್ಯಾರ್ಥಿಗಳಿಗೆ ಭರ್ಜರಿ ಆರ್ಥಿಕ ನೆರವು
• ಒಟ್ಟು 3.20 ಲಕ್ಷ ವಿದ್ಯಾರ್ಥಿವೇತನ ವಿತರಣೆ
• ಶೈಕ್ಷಣಿಕ ಪ್ರೋತ್ಸಾಹ ನೀಡಿದ ಆಡಳಿತ ಮಂಡಳಿ

ಬೆಳಗಾವಿಯ ಪ್ರಮುಖ ಎಂಬಿಎ ಶಿಕ್ಷಣ ಸಂಸ್ಥೆಯಾದ ಕೆಎಲ್‌ಎಸ್ ಐಎಂಇಆರ್ (ಸ್ವಾಯತ್ತ), ಗುಣಮಟ್ಟದ ಮ್ಯಾನೇಜ್‌ಮೆಂಟ್ ಶಿಕ್ಷಣವನ್ನು ಉತ್ತೇಜಿಸುವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತನ್ನ ಸೋದರಿ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಬರೋಬ್ಬರಿ 3,20,000 ರೂಪಾಯಿ ಮೊತ್ತದ ವಿದ್ಯಾರ್ಥಿವೇತನವನ್ನು ವಿತರಿಸಿದೆ. 2025-26ನೇ ಶೈಕ್ಷಣಿಕ ಸಾಲಿನಲ್ಲಿ ಎಂಬಿಎ ಕೋರ್ಸ್‌ಗೆ ಪ್ರವೇಶ ಪಡೆದಿರುವ ಅರ್ಹ ವಿದ್ಯಾರ್ಥಿಗಳಿಗೆ ಈ ನೆರವು ನೀಡಲಾಗಿದೆ.
ಬೆಳಗಾವಿಯ ಕೆಎಲ್‌ಎಸ್ ಐಎಂಇಆರ್ ಸಂಸ್ಥೆಯು ತನ್ನ ಸೋದರಿ ಸಂಸ್ಥೆಗಳಿಂದ ಎಂಬಿಎ ವ್ಯಾಸಂಗಕ್ಕಾಗಿ ಪ್ರವೇಶ ಪಡೆದಿರುವ ಒಟ್ಟು 32 ಅರ್ಹ ವಿದ್ಯಾರ್ಥಿಗಳಿಗೆ ತಲಾ 10,000 ರೂಪಾಯಿಗಳಂತೆ ಆರ್ಥಿಕ ಸಹಾಯಧನವನ್ನು ನೀಡಿದ್ದು, ಉನ್ನತ ಶಿಕ್ಷಣಕ್ಕೆ ಆಸರೆಯಾಗುವ ಹಾಗೂ ಶೈಕ್ಷಣಿಕ ಸಾಧನೆಗೆ ಪ್ರೇರೇಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಭಾವನಾ ನಾರಾಯಣ ಕಾಕತ್ಕರ್, ಕೀರ್ತಿ ಕಾಂಬ್ಳೆ, ಖುಷಿ ನಸಲಾಪುರೆ, ಮನಾಲಿ ಕಾಜೋಲ್ಕರ್, ಮಾನಸಿ ಪ್ರಶಾಂತ್ ಚೌಗುಲೆ, ಮಾರುತಿ ಕುರಬಗಟ್ಟಿ, ಪ್ರಜ್ಞಾ ಪ್ರಶಾಂತ್ ಹಾನಗೋಜಿ, ಪ್ರತೀಕ್ಷಾ ಮಲ್ಲಪ್ಪ ಪುಠಾಣಿ, ಪ್ರಿಯಾಂಕಾ ಗುರು ಪುಠಾಣಿ, ಪ್ರಿಯಾಂಶು ಉದಯಕುಮಾರ್ ಶೆಟ್ಟಿ, ರಾಹುಲ್ ರಾಮರಾಯ್ ವೆರ್ನೇಕರ್, ರಣವೀರ್ ಕಾನ್ಬರ್ಕರ್, ರಿಚಾ ಸುನಿಲ್ ಸದಾವರ್, ರೋಹನ್ ಶೆಟ್ಟಿ, ರೋಹಿತ್ ಅಜ್ಜಪ್ಪ ಸನ್ಗೌಡರ್, ಸಾಕ್ಷಿ ಜಾಧವ್, ಸಾಕ್ಷಿ ಶಿಂದೋಲ್ಕರ್, ಸ್ನೇಹಾ ನಾರಾಯಣ ಸಪ್ಲೆ, ಸೌಮ್ಯ ಗುಂಡಪ್ಪಗೌಡ ಪಾಟೀಲ್, ಸುದೀಪ್ ಚಡಿಚಾಳ್, ತನ್ವಿ ಭೈರು ಕಾಂಗ್ರಾಲ್ಕರ್, ತನ್ವಿ ರಾಜು ಸುತಾರ್, ವಿನಾಯಕ ದಳವಾಯಿ, ಮುಸ್ತಬೀನ್ ಅಥಣಿ, ಅಭಿಷೇಕ್ ಅನಿಲ್ ಕುಮಾರ್ ದೇಶಪಾಂಡೆ, ನಿತಿಕ್ ಶ್ರೀರಾಮ್ ಪ್ರಸಾದ್, ತೇಜಸ್ವಿನಿ ರಮೇಶ್ ಪಾಟೀಲ್, ಶ್ರಾವಣಿ ಶ್ರೀಕಾಂತ್ nಂದಗಡಕರ್, ಜಾನ್ಸನ್ ಆಂಥೋನ್ ನೊರೊನ್ಹಾ, ಸಮ್ಮೇದ್ ರಾಜೇಂದ್ರ ಜೈನರ್, ಸಿದ್ದೇಶ್ ಶ್ರೀಧರ್ ಚೌಹಾಣ್ ಮತ್ತು ಸುಮನ್ಸ್ ತೆಲಗಾಡಿ ಅವರಿಗೆ ವಿದ್ಯಾರ್ಥಿವೇತನದ ಹಣವನ್ನು ಹಸ್ತಾಂತರಿಸಲಾಯಿತು; ಇದೇ ವೇಳೆ ವಿದ್ಯಾರ್ಥಿವೇತನವನ್ನು ವಿತರಿಸಿ ಮಾತನಾಡಿದ ಕೆಎಲ್‌ಎಸ್ ಐಎಂಇಆರ್ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಉದಯ್ ಕಲ್ಕುಂದ್ರಿಕರ್, ಆಡಳಿತ ಮಂಡಳಿಯ ಸದಸ್ಯರು ಹಾಗೂ ಐಎಂಇಆರ್ ನಿರ್ದೇಶಕರಾದ ಡಾ. ಆರಿಫ್ ಶೇಖ್ ಅವರು ವಿದ್ಯಾರ್ಥಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರಲ್ಲದೆ, ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂತಹ ವಿದ್ಯಾರ್ಥಿವೇತನಗಳು ಹಾಗೂ ಶೈಕ್ಷಣಿಕ ಪ್ರೋತ್ಸಾಹಕಗಳನ್ನು ನೀಡುವ ಮೂಲಕ ಅವರ ಉನ್ನತ ಶಿಕ್ಷಣದ ಕನಸುಗಳಿಗೆ ಆಸರೆಯಾಗಲು ನಮ್ಮ ಸಂಸ್ಥೆಯು ಸದಾ ಬದ್ಧವಾಗಿದೆ ಎಂದು ಭರವಸೆ ನೀಡಿದರು.

Tags:

error: Content is protected !!