hubbali

ಹುಬ್ಬಳ್ಳಿಯಲ್ಲಿ ಗಾಳಿ ಮಳೆಗೆ ಉರುಳಿದ ಮರ: ಮನೆ, ವಾಹನಗಳು ಜಖಂ ಫಾರ್ಮ್ಯಾಟ್: ಎವಿ ಸ್ಥಳ: ಹುಬ್ಬಳ್ಳಿ

Share

ನಿನ್ನೆ ಹುಬ್ಬಳ್ಳಿಯಲ್ಲಿ ಸುರಿದ ಧಾರಾಕಾರ ಮಳೆಗೆ ಸಿಲುಕಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಳೇ ಹುಬ್ಬಳ್ಳಿಯ ಶಿವಪುತ್ರ ನಗರದ ಮೆಹಬೂಬ್ ಸುಭಾನಿ ದರ್ಗಾ ಹಾಗೂ ಸುತ್ತಮುತ್ತಲಿನ ಮನೆ ಮತ್ತು ವಾಹನಗಳ ಮೇಲೆ ಬೃಹತ್ ಬೇವಿನ ಮರ ಉರುಳಿಬಿದ್ದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಇನ್ನು ವರುಣನ ಆರ್ಭಟಕ್ಕೆ ಹುಬ್ಬಳ್ಳಿಯ ಸಿದ್ದೇಶ್ವರ ಪಾರ್ಕ್‌ನ ಭಾರತಿ ಕಾಲೋನಿಯಲ್ಲಿ ಮತ್ತೊಂದು ದೊಡ್ಡ ಮರ ವಿದ್ಯುತ್ ಕಂಬದ ಮೇಲೆ ಮುರಿದು ಬಿದ್ದಿದೆ. ನಗರದಾದ್ಯಂತ ಮರಗಳು ನೆಲಕಚ್ಚಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳು ಜಖಂಗೊಂಡಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

Tags:

error: Content is protected !!