BELAGAVI

ರೈಲ್ವೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿಸಲು ಸಿಎಂಗೆ ಪತ್ರ ಬರೆದಿದ್ದೇನೆ; ಸಂಸದ ಜಗದೀಶ್ ಶೆಟ್ಟರ್

Share

ಬೆಳಗಾವಿ, ಕಿತ್ತೂರು ಹಾಗೂ‌ ಧಾರವಾಡ ರೈಲು ಮಾರ್ಗಕ್ಕೆ ಕೆಲ ಭೂ ಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ರಾಜ್ಯ ಸರಕಾರ ಅದನ್ನು ಬಗೆಹರಿಸಿ ಕಾಮಗಾರಿ ಆರಂಭಿಸಬೇಕು ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು.

ಭಾನುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳಗಾವಿ, ಕಿತ್ತೂರು ‌ಧಾರವಾಡ ರೈಲ್ವೆ ಕಾಮಗಾರಿಗೆ ರಾಜ್ಯ ಸರಕಾರದ ಹಂತದಲ್ಲಿ ಭೂಸ್ವಾಧೀನ ‌ಪ್ರಕ್ರಿಯೆ ನಡೆಸಿ ರೈತರಿಗೆ ಪರಿಹಾರ ನೀಡಿದರೆ ಕಾಮಗಾರಿ ಆರಂಭವಾಗಿ ರೈಲ್ವೆ ಪ್ರಯಾಣಿಕರಿಗೆ ಅನಕೂಲವಾಗುತ್ತದೆ. ಈ ಕುರಿತು ಈಗಾಗಲೇ ಸಿಎಂಗೆ ಪತ್ರ ಬರೆದಿದ್ದೇನೆ ಎಂದರು.

ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ಸ್ 4,500 ಕೋಟಿ ರೂ. ಠೇವಣಿದಾರರಿಗೆ ವಂಚನೆ ಮಾಡಿರುವ ಕುರಿತು ಸರಕಾರ ತನಿಖೆ ನಡೆಸುತ್ತಿದೆ. ತನಿಖೆ ನಡೆಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು‌.
ರಾಜ್ಯದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಒಳಜಗಳ ನಡೆಯುತ್ತಿದೆ. ಇವರ ಒಳ ಜಗಳದಿಂದ ಸರಕಾರ ಪತನವಾಗಲಿದೆ ಎಂದರು.

Tags:

error: Content is protected !!