ಬಂಗಾರದ ಸರ ಹಾಗೂ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ, ಧಾರವಾಡ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡ ಶಹರ ಹಾಗೂ ಉಪ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿದ ಹುಬ್ಬಳ್ಳಿ ಮೂಲದ ಅಸೀಫ್ ಕಾಶಿಂಸಾಬ ಬೇಗ್ ಹಾಗೂ ಅಮ್ಮಿನಭಾವಿ ಗ್ರಾಮದ ಗುರುಪ್ರಸಾದ ಶಿವಾನಂದ ಉಳ್ಳಿಗೇರಿ ಎಂಬ ಆರೋಪಿಗಳನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ 4,50,000 ರೂಪಾಯಿ ಮೌಲ್ಯದ 31 ಗ್ರಾಂ ಬಂಗಾರದ ಆಭರಣ, 39,600 ರೂಪಾಯಿ ಮೌಲ್ಯದ 124 ಗ್ರಾಂ ಬೆಳ್ಳಿಯ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಇನ್ನೂ ಶಹರ ಠಾಣೆಯ ಪೊಲೀಸರ ಕಾರ್ಯಕ್ಕೆ ಕಮಿಷನರೇಟ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

