BELAGAVI

ಬೆಳಗಾವಿಯಲ್ಲಿ ಶ್ರದ್ಧಾಭಕ್ತಿಯಿಂದ ಧರ್ಮವೀರ ಸಂಭಾಜೀ ಮಹಾರಾಜರ ಜನ್ಮದಿನಾಚರಣೆ

Share

ಬೆಳಗಾವಿಯ ಬಿಜೆಪಿ ಯುವ ಘಟಕದ ನೇತೃತ್ವದಲ್ಲಿ ಧರ್ಮವೀರ ಛತ್ರಪತಿ ಸಂಭಾಜೀ ಮಹಾರಾಜರ ಜನ್ಮದಿನಾಚರಣೆಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು.

ಭಾರತೀಯ ಜನತಾ ಪಕ್ಷದ ಯುವ ಘಟಕದ ವಿಕ್ರಮ್ ಸೋಂಜಿ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜರ ಜನ್ಮದಿನವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಗರದ ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ ವೃತ್ತದಲ್ಲಿರುವ ಶಂಭು ತೀರ್ಥದಲ್ಲಿ ಪೂಜೆ ಸಲ್ಲಿಸಿ ಗೌರವ ನಮನಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು, ಇಂದು ಛತ್ರಪತಿ ಸಂಭಾಜೀ ಮಹಾರಾಜರ ಜನ್ಮ. ಇದು ನಮ್ಮೆಲ್ಲರಿಗೂ ದೀಪಾವಳಿಯ ಹಬ್ಬ. ಅನ್ಯ ಧರ್ಮೀಯರಿಗೆ ಹಲವಾರು ಜಗತ್ತಿನಲ್ಲಿ ಹಲವಾರು ದೇಶಗಳಿವೆ. ಆದರೇ, ಹಿಂದೂಗಳಿಗೆ ಭಾರತ ಏಕಮೇವ ರಾಷ್ಟ್ರವಾಗಿದ್ದು, ದೇಶದಲ್ಲಿ ಹಿಂದೂ ಧರ್ಮವನ್ನು ಇಂದಿಗೂ ಜೀವಂತವಾಗಿಗಿಸುವಲ್ಲಿ ಛತ್ರಪತಿ ಶಿವಾಜೀ ಮಹಾರಾಜರು ಮತ್ತು ಧರ್ಮವೀರ ಸಂಭಾಜೀ ಮಹಾರಾಜರ ತ್ಯಾಗಬಲಿದಾನಗಳೇ ಸಾಕ್ಷಿ. ಎಲ್ಲ ಹಿಂದೂ ಬಾಂಧವರು ಸಂಭಾಜೀ ಮಹಾರಾಜರ ಜನ್ಮದಿನವಾದ ಮೇ 14ನ್ನು ದೀಪಾವಳಿಯಂತೆ ತಮ್ಮ ಪ್ರತಿ ಮನೆಯಲ್ಲೂ ಆಚರಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಿವಶಂಭು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!