Belagavi

ಗಣತಿ ಯಶಸ್ವಿ : ಸಿಬ್ಬಂದಿಯನ್ನು ಅಭಿನಂದಿಸಿದ ಪಾಲಿಕೆ ಆಯುಕ್ತ ಕಾರ್ತಿಕ್ ಎಂ

Share

ಸರ್ಕಾರದ ಅತ್ಯಂತ ಮಹತ್ವದ ಗಣತಿ ಕಾರ್ಯವನ್ನು ಒಂದು ವಾರ ಮುಂಚಿತವಾಗಿಯೇ ಮುಗಿಸಿ ಯಶಸ್ವಿಗೊಳಿಸಿದ ಮಹಾನಗರ ಪಾಲಿಕೆಯ ಗಣತಿ ಅಧಿಕಾರಿಗಳನ್ನು ಆಯುಕ್ತ ಕಾರ್ತಿಕ್ ಎಂ. ಅಭಿನಂದನಾ ಪತ್ರ ನೀಡಿ ಗೌರವಿಸಿದರು.

ಪಾಲಿಕೆಯ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರಿಗೆ ಗಡಿಗೆ ಹೋಗಿ ದೇಶ ಕಾಯುವ ಹೋರಾಡುವ ಅವಕಾಶವಿಲ್ಲದಿದ್ದರೂ ಒಳಗಿನ ಆಡಳಿತ ವ್ಯವಸ್ಥೆಯಲ್ಲಿ ಗಣತಿ, ಚುನಾವಣೆ, ಪಲ್ಸ್ ಪೋಲಿಯೋ, ಕೊರೋನಾದಂತಹ ಸಂದರ್ಭದಲ್ಲಿ ನೌಕರರೂ ಸಹ ಯೋಧರಂತೆ ಕಾರ್ಯನಿರ್ವಹಿಸಿದ್ದಾರೆ. ಇದು ದೇಶ ಸೇವೆಯೇ ಆಗಿದೆ. ಈ ಹಿನ್ನಲೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಗಣತಿ ಅಧಿಕಾರಿಗಳು, ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಅನೇಕ ತಾಂತ್ರಿಕ ತೊಂದರೆಗಳು ಹಾಗೂ ಬಿರುಬಿಸಿಲನ್ನೂ ಲೆಕ್ಕಿಸದೆ ಪರಸ್ಪರ ಸಹಕಾರದಿಂದ ಅಚ್ಚುಕಟ್ಟಾಗಿ ಗಣತಿ ಕಾರ್ಯ ನಿರ್ವಹಿಸಿ ಯಶಸ್ವಿಗೊಳಿಸಿದ್ದು, ಅವರೆಲ್ಲರೂ ಅಭಿನಂದನಾ ರ್ಹರು ಎಂದು ಹೇಳಿದರು.

ಗಣತಿಯಲ್ಲಿ ಸಾವಿರ ಸಿಬ್ಬಂದಿ , ೧೫೦ ಮೊಲ್ವಿಚಾರಕರು ಗಣತಿ ಕಾರ್ಯದಲ್ಲಿ ಒಟ್ಟು ಒಂದು ಸಾವಿರದಾ ಎರಡು ನೂರು ಸಿಬ್ಬಂದಿ ಕಾರ್ಯನಿರ್ವಹಿಸಿದ್ದು, ಎಂಟು ಬ್ಲಾಕ್ ಗಳನ್ನು ಮಾಡಲಾಗಿತ್ತು

50 ರ ಒಂದು ಬ್ಯಾಚ್ ಮಾಡಿ 3 ದಿನಗಳ ಕಾಲ 7 ಅಧಿಕಾರಿಗಳು ತರಬೇತಿ ನೀಡಿದ್ದಾರೆ. ಏಳು ಜನ ಚಾರ್ಜ್ ಅಧಿಕಾರಿಗಳು ಮೇಲ್ವಿಚಾರಕರಾಗಿದ್ದರು. ಆಯುಕ್ತರ ಮಾರ್ಗದರ್ಶನ ಹಾಗೂ ಸಿಬ್ಬಂದಿಯ ಉತ್ತಮ ಸಯೋಜನೆಯಿಂದಾಗಿ ಕಾರ್ಯ ಯಶಸ್ವಿಯಾಗಿದೆ ಎಂದು ನಗರ ಗಣತಿ ಅಧಿಕಾರಿ, ಉಪ ಆಯುಕ್ತ ( ಕಂದಾಯ) ಡಾ. ಸಿದ್ದು ಹುಲ್ಲೋಳಿ ಹೇಳಿದರು.
ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ ತಳವಾರ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು

Tags:

error: Content is protected !!