Raichur

ಪ್ರಶ್ನೆಯೇ ಇಲ್ಲ…5 ವರ್ಷ ನಮ್ಮ ಸರ್ಕಾರವೇ ಇರಲಿದ; : ಸಿಎಂ ಕುರ್ಚಿ ಗೊಂದಲಕ್ಕೆ ಸತೀಶ್ ಜಾರಕಿಹೊಳಿ ಬ್ರೇಕ್!

Share

• ನಮ್ಮ ಸರ್ಕಾರ ಐದು ವರ್ಷ ಇರುತ್ತೆ
• ಹೈಕಮಾಂಡ್ ನಿರ್ಧಾರವೇ ನಮಗೆ ಅಂತಿಮ ತೀರ್ಪು
• ಸುಧಾಕರ್ ಅಗಲಿಕೆ ಸರ್ಕಾರಕ್ಕೆ ದೊಡ್ಡ ನಷ್ಟ
• ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ

ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಬದಲಾವಣೆ ಚರ್ಚೆ ಜೋರಾಗಿರುವ ಬೆನ್ನಲ್ಲೇ, ರಾಯಚೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅಬ್ಬರಿಸಿದ್ದಾರೆ. ಪ್ರಧಾನಿ ಮೋದಿ ಹೇಳಿಕೆಗೆ ಟಾಂಗ್ ನೀಡುತ್ತಾ, “ನಮ್ಮ ಸರ್ಕಾರ 5 ವರ್ಷ ಸುಭದ್ರವಾಗಿ ಇರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಯಚೂರಿನ ಮುದಗಲ್‌ನಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಸಚಿವ ಡಿ. ಸುಧಾಕರ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಸರ್ಕಾರ ಮತ್ತು ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ನಾಳೆ ಚಳ್ಳಕೆರೆಯಲ್ಲಿ ನಡೆಯಲಿರುವ ಅಂತಿಮ ಸಂಸ್ಕಾರದಲ್ಲಿ ನಾವು ಭಾಗವಹಿಸಲಿದ್ದೇವೆ. ಅವರ ದೀರ್ಘಕಾಲದ ರಾಜಕೀಯ ಅನುಭವ ಮತ್ತು ಆದರ್ಶಗಳು ನಮ್ಮೊಂದಿಗೆ ಸದಾ ಇರುತ್ತವೆ ಎಂದು ಸ್ಮರಿಸಿದರು.
ಸಿಎಂ ಕುರ್ಚಿ ಗೊಂದಲದ ಬಗ್ಗೆ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, “ನಮ್ಮ ಸರ್ಕಾರ ಕರ್ನಾಟಕದಲ್ಲಿ ಐದು ವರ್ಷ ಪೂರೈಸಲಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಪಕ್ಷದ ಆಂತರಿಕ ವಿಚಾರಗಳು, ಕಾದಾಟ ಅಥವಾ ಘರ್ಷಣೆ ಏನೇ ಇದ್ದರೂ ಅದನ್ನು ನಮ್ಮ ಹೈಕಮಾಂಡ್ ಬಗೆಹರಿಸಲಿದೆ. ಸಿದ್ದರಾಮಯ್ಯನವರು ಹೇಳಿದಂತೆ ವರಿಷ್ಠರ ತೀರ್ಮಾನವೇ ನಮಗೆ ಅಂತಿಮ,” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರದ ಕುರಿತು ಮಾತನಾಡಿದ ಅವರು, ಟಿಕೆಟ್ ಬೇಡಿಕೆಯ ನೆಪ ನೀಡಿರುವುದು ಸರಿಯಲ್ಲ ಎಂದರು. ಕೇವಲ 224 ಶಾಸಕರಿಗಾಗಿ ಪಂದ್ಯ ಸ್ಥಳಾಂತರ ಮಾಡುವುದು ಅಸಾಧ್ಯದ ಮಾತು. ಬಿಸಿಸಿಐ ಅಧ್ಯಕ್ಷರು ಗುಜರಾತ್ ಮೂಲದವರಾಗಿರುವುದರಿಂದ ತಮ್ಮ ಲಾಭಕ್ಕಾಗಿ ಅಹಮದಾಬಾದ್‌ಗೆ ಪಂದ್ಯವನ್ನು ಕೊಂಡೊಯ್ದಿದ್ದಾರೆ ಎಂದು ನೇರವಾಗಿಯೇ ಆರೋಪಿಸಿದರು.

Tags:

error: Content is protected !!