Belagavi

ಬಡ ವಿದ್ಯಾರ್ಥಿಗಳ ಬಾಳಿಗೆ ಆಸರೆಯಾದ ಶಾಂತಾಯಿ ವಿದ್ಯಾ ಆಧಾರ: ಪ್ರತಿಭಾ ಪುರಸ್ಕಾರದಲ್ಲಿ ಶುಲ್ಕ ವಿತರಣೆ

Share

• ಬೆಳಗಾವಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
• ಪ್ರತಿಭಾ ಪುರಸ್ಕಾರದಲ್ಲಿ ಶೈಕ್ಷಣಿಕ ಶುಲ್ಕ ವಿತರಣೆ
• ರದ್ದಿ ದಾನ ಮಾಡಿ ಶಿಕ್ಷಣಕ್ಕೆ ಸಹಕರಿಸಿ
• ಶಾಂತಾಯಿ ವಿದ್ಯಾ ಆಧಾರ ಸಂಸ್ಥೆಯ ಸಮಾಜಸೇವೆ

ಬೆಳಗಾವಿಯ ಶಾಂತಾಯಿ ವಿದ್ಯಾ ಆಧಾರ ಸಂಸ್ಥೆಯೂ ಆರ್ಥಿಕವಾಗಿ ಹಿಂದುಳಿದಿದ್ದರೂ ಸಾಧಿಸುವ ಛಲ ಹೊಂದಿರುವ ವಿದ್ಯಾರ್ಥಿಗಳ ಪಾಲಿಗೆ ಈ ಸಂಸ್ಥೆ ಆಶಾಕಿರಣವಾಗಿ ಮೂಡಿಬಂದಿದೆ.
ಬೆಳಗಾವಿಯ ಗೋಗಟೆ ಕಾಲೇಜಿನ ವೇಣುಗೋಪಾಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಇಬ್ಬರು ಅಗತ್ಯವಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವನ್ನು ಭರಿಸುವ ಮೂಲಕ ಶಾಂತಾಯಿ ವಿದ್ಯಾ ಆಧಾರ ಸಂಸ್ಥೆಯು ಮಾದರಿಯಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಮೇಯರ್ ವಿಜಯ ಮೋರೆ ಅವರು ಮಾತನಾಡಿ, ಸಮಾಜದ ಪ್ರತಿಯೊಬ್ಬರೂ ಹಳೆ ಪತ್ರಿಕೆಗಳನ್ನು (ರದ್ದಿ) ದಾನ ಮಾಡುವ ಮೂಲಕ ಈ ಶೈಕ್ಷಣಿಕ ಅಭಿಯಾನಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಮುಖ್ಯ ಅತಿಥಿಗಳಾದ ಶಿರಿಶ್ ಚಿಂಚೋಳಿಮಠ, ಗೋಗಟೆ ಕಾಲೇಜಿನ ಪ್ರಾಚಾರ್ಯ ಡಾ. ವೇಣುಗೋಪಾಲ್ ಜಲಿಹಾಲ್ ಹಾಗೂ ಗಣ್ಯರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಚೆಕ್ ಹಸ್ತಾಂತರಿಸಲಾಯಿತು. ಈ ಅಭಿನಂದನಾರ್ಹ ಕಾರ್ಯವು ವಿದ್ಯಾರ್ಥಿಗಳ ಶೈಕ್ಷಣಿಕ ಕನಸಿಗೆ ಬಲ ತುಂಬಿದ್ದು, ನೆರೆದಿದ್ದ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು.

Tags:

error: Content is protected !!