1. ಬೆಳಗಾವಿ ರಾಮಕೃಷ್ಣ ಮಿಷನ್ ಆಶ್ರಮಕ್ಕೆ ರಜತ ಸಂಭ್ರಮ
2. ಶ್ರೀರಾಮಕೃಷ್ಣರು ತ್ಯಾಗ ಮತ್ತು ವೈರಾಗ್ಯದ ಮಹಾಮೂರ್ತಿ
3. ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ಮಹೋತ್ಸವ
4. ಸಂಗೀತಾ ಕಟ್ಟಿ ಅವರಿಂದ ಶರಣದಾಸ ವಾಣಿ ಗಾಯನ

ಬೆಳಗಾವಿಯ ಐತಿಹಾಸಿಕ ಕೋಟೆ ಆವರಣದಲ್ಲಿರುವ ರಾಮಕೃಷ್ಣ ಮಿಷನ್ ಆಶ್ರಮಕ್ಕೆ ಈಗ 25ರ ಸಂಭ್ರಮ. ರಜತ ಮಹೋತ್ಸವದ ಮೊದಲ ದಿನದ ಸಭೆಯಲ್ಲಿ ಮಾತನಾಡಿದ ಸ್ವಾಮಿ ಜೀತಕಾಮಾನಂದಜೀ ಅವರು, ಶ್ರೀರಾಮಕೃಷ್ಣ ಪರಮಹಂಸರ ಜೀವನದ ಅವತಾರ ವೈಶಿಷ್ಟ್ಯ ಹಾಗೂ ಅವರಲ್ಲಿದ್ದ ಅಪಾರ ವೈರಾಗ್ಯದ ಬಗ್ಗೆ ಮನಮುಟ್ಟುವಂತೆ ವಿವರಿಸಿದರು.
ಸ್ವಾಮಿ ವಿವೇಕಾನಂದರ ಪವಿತ್ರ ವಾಸ್ತವ್ಯದಿಂದ ಪುನೀತವಾದ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮವು ಯಶಸ್ವಿ 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಮೇ 8 ರಿಂದ 10 ರವರೆಗೆ ಬೃಹತ್ ರಜತ ಮಹೋತ್ಸವವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನಾ ದಿನವಾದ ಇಂದು ಶ್ರೀ ಸ್ವಾಮೀ ಜೀತಕಾಮಾನಂದಜೀ ಮಹಾರಾಜರು ಶ್ರೀರಾಮಕೃಷ್ಣರ ಜೀವನ ಪ್ರವಾಹದ ಕುರಿತು ಮಾತನಾಡಿದರು. ಶ್ರೀರಾಮಕೃಷ್ಣರಲ್ಲಿ ನಾವು ವಿಶೇಷವಾಗಿ ವೈರಾಗ್ಯ ಮತ್ತು ತ್ಯಾಗವನ್ನು ಕಾಣಬಹುದು. ಅವರ ಸಂಪೂರ್ಣ ಜೀವನವೇ ನಮಗೆ ಒಂದು ದೊಡ್ಡ ಅನುಭವದ ಪ್ರವಾಹವಿದ್ದಂತೆ ಎಂದು ಅವರು ಬಣ್ಣಿಸಿದರು.

ಈ ವೇಳೆ ಶ್ರೀ ಸ್ವಾಮೀ ಜೀತಕಾಮಾನಂದಜೀ ಮಹಾರಾಜರು ಶ್ರೀರಾಮಕೃಷ್ಣರ ಅವತಾರದ ವೈಶಿಷ್ಟ್ಯಗಳ ಕುರಿತು ಮಾತನಾಡಿದರು. ಶ್ರೀರಾಮಕೃಷ್ಣರ ಹುಟ್ಟು, ಅವರ ಜೀವನದ ಸನ್ನಿವೇಶಗಳನ್ನು ತಿಳಿಸಿದ ಅವರು, ಶ್ರೀರಾಮಕೃಷ್ಣರಲ್ಲಿ ನಾವು ವಿಶೇಷವಾಗಿ ವೈರಾಗ್ಯ ಮತ್ತು ತ್ಯಾಗವನ್ನು ಕಾಣಬಹುದು. ತ್ಯಾಗದ ಮೂರ್ತಿಯೇ ಶ್ರೀ ರಾಮಕೃಷ್ಣರ. ಜೀವನಗಳ ಅನುಭವದ ಪ್ರವಾಹವೇ ಶ್ರೀರಾಮಕೃಷ್ಣರು. ಶ್ರೀರಾಮಕೃಷ್ಣರ ಸಂಪೂರ್ಣ ಜೀವನವೇ ವೈಶಿಷ್ಟ್ಯಪೂರ್ಣವಾಗಿದೆ ಎಂದರು.
ಬೆಲೂರು ಮಠದ ಉಪಾಧ್ಯಕ್ಷರಾದ ಸ್ವಾಮಿ ಸುಹಿತಾನಂದಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಈ ಸಂಭ್ರಮದಲ್ಲಿ ದೇಶದ ವಿವಿಧ ಭಾಗಗಳ ಗಣ್ಯರು ಭಾಗವಹಿಸುತ್ತಿದ್ದಾರೆ. 1892ರಲ್ಲಿ ವಿವೇಕಾನಂದರು ವಾಸ್ತವ್ಯ ಹೂಡಿದ್ದ ಹರಿಪಾದ ಮಿತ್ರ ಅವರ ಐತಿಹಾಸಿಕ ನಿವಾಸದಲ್ಲಿ ಇಂದು ಈ ಆಶ್ರಮವು ಲೋಕಸೇವೆಯಲ್ಲಿ ನಿರತವಾಗಿದೆ. ಮಹೋತ್ಸವದ ಮೊದಲ ದಿನ ‘ಶ್ರೀ ರಾಮಕೃಷ್ಣ ಮನನಮ್’ ಕಾರ್ಯಕ್ರಮ ಭಕ್ತರ ಗಮನ ಸೆಳೆಯಿತು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ಎಸ್.ಪಿ. ಗುರುದಾಸ್ ಅವರಿಂದ ಹರಿಕಥೆ ಹಾಗೂ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರಿಂದ ‘ಶರಣದಾಸ ವಾಣಿ’ ಸಂಗೀತ ಸುಧೆ ಹರಿಯಿತು. ಆಶ್ರಮದ ಪ್ರಮುಖರಾದ ಆತ್ಮಪ್ರಾಣಾನಂದಜೀ ಮಹಾರಾಜ, ತ್ಯಾಗಿಶ್ವರಾನಂದಜೀ ಮಹಾರಾಜ ಸೇರಿದಂತೆ ಇನ್ನುಳಿದವರು ವೇದಿಕೆಯ ಮೇಲೆ ಉಪಸ್ಥಿತರಿದ್ಧರು. ಈ ಮೂರು ದಿನಗಳ ಕಾಲ ಬೆಳಗಾವಿಯ ಕೋಟೆ ಆವರಣವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸೌರಭಕ್ಕೆ ಸಾಕ್ಷಿಯಾಗಲಿದ್ದು, ಭಕ್ತರು ಸಾಗರೋಪಾದಿಯಲ್ಲಿ ಹರಿದುಬರುತ್ತಿದ್ದಾರೆ.
